‘ಹನುಮಾನ್’ ಖ್ಯಾತಿಯ ನಟ ತೇಜ್ ಸಜ್ಜಾ (Teja Sajja) ನಟನೆಯ ‘ಮಿರಾಯ್’ (Mirai) ಚಿತ್ರ ಮೂಲಕ ಬರಲು ಸಜ್ಜಾಗಿದ್ದಾರೆ. ‘ಹನುಮಾನ್’ ಚಿತ್ರ ಆದ್ಮೇಲೆ ಮಾಡಿರೋ ಮತ್ತೊಂದು ಸೂಪರ್ ಹೀರೋ ಚಿತ್ರವೇ ಇದಾಗಿದೆ. ಬಹುಭಾಷೆಯಲ್ಲಿಯೇ ಬರುತ್ತಿರುವ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.
ವೈಬ್ ಐತೆ ಬೇಬಿ ಎಂದು ನಾಯಕ ತೇಜ್ ಸಜ್ಜಾ ಮತ್ತು ರಿತಿಕಾ ನಾಯಕ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿಯೂ ಈ ಹಾಡು ರಿಲೀಸ್ ಆಗಿದ್ದು, ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಗೌರ ಹರಿ ಸಂಗೀತ ನೀಡಿದ್ದಾರೆ, ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ: ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆ ಕುಟುಂಬ
‘ಮಿರಾಯ್’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳಿವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರ 2ಡಿ ಮತ್ತು 3ಡಿ ರೂಪದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತಿದೆ. ಅತೀ ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 5ರಂದು ಮಿರಾಯ್ ಬಿಡುಗಡೆಯಾಗಲಿದೆ.
‘ಮಿರಾಯ್’ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಿರುತೆರೆಯ ಖ್ಯಾತ ನಟ ಚಂದನ್ ನಿರ್ದೇಶನದ ಚಿತ್ರಕ್ಕೆ ಕಿಚ್ಚನ ಕಂಠ
ಮನೋಜ್ ಮಂಚು ಖಳನಾಯಕನಾಗಿ ಮತ್ತು ನಾಯಕಿಯಾಗಿ ರಿತಿಕಾ ನಾಯಕ್ ನಟಿಸಿರುವ ಈ ಚಿತ್ರದಲ್ಲಿ ಡಿಫರೆಂಟ್ ರೋಲ್‌ನಲ್ಲಿ ತೇಜ್ ಸಜ್ಜಾ ನಟಿಸುತ್ತಿದ್ದಾರೆ. ಕಾರ್ತಿಕ್ ‘ಮಿರಾಯ್’ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ನಾಗೇಂದ್ರ ತಂಗಳ ಕಲಾ ನಿರ್ದೇಶನ, ಗೌರ ಹರಿ ಸಂಗೀತ ಚಿತ್ರಕ್ಕಿದೆ.