– ಕುಸ್ತಿಪಟುಗಳನ್ನು ಕಾಂಗ್ರೆಸ್ ದಾಳವಾಗಿ ಬಳಸಿಕೊಂಡಿದೆ ಎಂದು ಆರೋಪ
ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಬಜರಂಗ್ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ಈ ಬೆನ್ನಲ್ಲೇ ಹರಿಯಾಣ ಚುನಾವಣೆಯಲ್ಲಿ ವಿನೇಶ್ಗೆ ಕಾಂಗ್ರೆಸ್ಗೆ ಟಿಕೆಟ್ ಘೋಷಣೆಯಾಗಿದೆ. ಪುನಿಯಾಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಈ ವಿಚಾರವಾಗಿ ಲೈಂಗಿಕ ಕಿರುಕುಳ ಆರೋಪಿ, ಮಾಜಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಸಿಡಿದೆದ್ದಿದ್ದಾರೆ. ಇದನ್ನೂ ಓದಿ: ಪ್ರಸಾದಕ್ಕೆ ಪರವಾನಗಿ; ರಾಜ್ಯ ಸರ್ಕಾರದ್ದು ಹುಚ್ಚು ಆದೇಶ – ಪ್ರಲ್ಹಾದ್ ಜೋಶಿ ಆಕ್ರೋಶ
Advertisement
ಈ ಕುರಿತು ದೆಹಲಿಯಲ್ಲಿ (New Delhi) ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕುಸ್ತಿಪಟುಗಳನ್ನು ಕಾಂಗ್ರೆಸ್ (Congress) ದಾಳವಾಗಿ ಬಳಸಿಕೊಂಡಿದೆ. ರೆಸ್ಲರ್ಗಳು ಪ್ರತಿಭಟನೆ ಆರಂಭಿಸಿದ ದಿನವೇ, ಇದರ ಹಿಂದೆ ಕಾಂಗ್ರೆಸ್ ಪಾತ್ರವಿದೆ ಎಂದು ಹೇಳಿದ್ದೆ. ಈಗ ಅದೇ ನಿಜವಾಗಿದೆ. ಕಾಂಗ್ರೆಸ್ ಸಂಚಿಗೆ ವಿನೇಶ್ ಮತ್ತು ಬಜರಂಗ್ ದಾಳವಾಗಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್ ಮೇಲೆ ಹಿಡಿತ ಸಾಧಿಸಲು ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಪಕ್ಷ ಇಂತಹ ಕೆಲಸಗಳನ್ನು ಮಾಡುತ್ತಲೇ ಇರಯತ್ತದೆ. ಇದಕ್ಕಾಗಿ ಭೂಪಿಂದರ್ ಹೂಡಾ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕುಟುಂಬ ಕುಸ್ತಿಪಟುಗಳನ್ನು ದಾಳವಾಗಿ ಬಳಸಿಕೊಂಡಿದೆ ಎಂದು ಕಿಡಿ ಕಾರಿದ್ದಾರೆ.
Advertisement
Advertisement
ಈ ವೇಳೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅಂತಿಮ ಹಂತದಲ್ಲಿ ಅನರ್ಹಗೊಂಡ ವಿನೇಶ್ಗೆ ದೇವರೇ ಶಿಕ್ಷೆ ನೀಡಿದ್ದಾನೆ ಎಂದು ಬ್ರಿಜ್ಭೂಷಣ್ ಹೇಳಿದ್ದಾರೆ. ಇದನ್ನೂ ಓದಿ: ಹಲ್ಲೆ ನಡೆಸಲು ಪವಿತ್ರಾಗೆ ದರ್ಶನ್ ಪ್ರಚೋದನೆ – ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕರಗದ ನಟಿ; ಚಾರ್ಜ್ಶೀಟ್ನಲ್ಲಿ ರಹಸ್ಯ ಸ್ಫೋಟ
Advertisement
ಮುಂದುವರಿದು, ಒಬ್ಬ ಆಟಗಾರ ಒಂದು ದಿನದಲ್ಲಿ 2 ತೂಕದ ವಿಭಾಗಗಳಲ್ಲಿ ಟ್ರಯಲ್ಸ್ ನೀಡಬಹುದೇ ಎಂದು ನಾನು ವಿನೇಶ್ ಅವರನ್ನು ಕೇಳಲು ಬಯಸುತ್ತೇನೆ. ತೂಕದ ನಂತರ 5 ಗಂಟೆಗಳ ಕಾಲ ಪ್ರಯೋಗ ನಿಲ್ಲಿಸಬಹುದೇ? ನೀವು ಕುಸ್ತಿಯನ್ನು ಗೆಲ್ಲಲಿಲ್ಲ, ನೀವು ಮೋಸದಿಂದ ಅಲ್ಲಿಗೆ ಹೋಗಿದ್ದೀರಿ. ದೇವರು ನಿಮಗೆ ಅದೇ ಶಿಕ್ಷೆ ನೀಡಿದ್ದಾನೆ ಎಂದು ಲೇವಡಿ ಮಾಡಿದ್ದಾರೆ. ಇದು ಟೀಕೆಗೆ ಕಾರಣವಾಗಿದೆ. ಇದನ್ನೂ ಓದಿ: 25 ವರ್ಷಗಳ ಬಳಿಕ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್ ತಪ್ಪೊಪ್ಪಿಗೆ!