– ಯಾವುದೇ ವ್ಯಕ್ತಿ ಜೊತೆ ನನ್ನ ಹೋರಾಟ ಅಲ್ಲ
– ತಪ್ಪು ಮಾಡಿದ್ರೆ ಅನುಭವಿಸಿಯೇ ಹೋಗೋದು
ಬೆಂಗಳೂರು: ಪೈರಸಿ ಮಾಡುವುದಕ್ಕೆ ಜನರು ತುಂಬಾ ಶ್ರಮಪಟ್ಟಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ. ಆದರೆ ಎಲ್ಲದಕ್ಕೂ ಒಂದು ಅಂತ್ಯ ಇದೆ. ಕಾಲವೇ ಅವರಿಗೆ ಉತ್ತರ ಕೊಡುತ್ತದೆ ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಪೈರಸಿ ವಿರುದ್ಧ ಹೋರಾಟ ಮಾಡಬಹುದು. ಆದರೆ ಕೆಟ್ಟ ಉದ್ದೇಶದ ಬಗ್ಗೆ ಹೇಗೆ ಹೋರಾಟ ಮಾಡುತ್ತೀರಾ ಎಂದು ಪ್ರಶ್ನಿಸಿದ ಕಿಚ್ಚ, ನನ್ನ ಹೋರಾಟ ಯಾವುದೇ ವ್ಯಕ್ತಿ ಜೊತೆ ಅಲ್ಲ. ಬದಲಿಗೆ ಕೆಟ್ಟ ಉದ್ದೇಶದ ಬಗ್ಗೆ ನಾನು ಹೋರಾಟ ಮಾಡುತ್ತಿದ್ದೇನೆ. ಸಿನಿಮಾ ಹಾಳು ಮಾಡಬೇಕು ಎಂಬ ವಿಷಯ ಅವರಿಗೆ ಬಿಟ್ಟಿದ್ದು, ಪೈರಸಿ ಇಂದಿನಿಂದ ಇಲ್ಲ, ತುಂಬಾ ದಿನದಿಂದ ಇದೆ. ಆದರೆ ಈ ಬಾರಿ ಪೈರಸಿ ಜಾಸ್ತಿಯಾಗಿದೆ. ಪೈರಸಿ ಮಾಡುವುದಕ್ಕೆ ಜನರು ತುಂಬಾ ಶ್ರಮಪಟ್ಟಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ. ಆದರೆ ಎಲ್ಲದಕ್ಕೂ ಒಂದು ಅಂತ್ಯ ಇದೆ. ಕಾಲ ಉತ್ತರ ಕೊಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್
Advertisement
Advertisement
ಅವರು ಪೂಜಿಸೋ ದೇವರನ್ನೇ ನಾವು ಪೂಜಿಸುತ್ತಿರುವುದು. ಅವರಿಗೆ ಇರುವ ನ್ಯಾಯವೇ ನಮಗೆ ಇರುವುದು. ಯಾವ ದೇವರು ಹೇಗೆ ಆಟ ಆಡುತ್ತಿದ್ದಾರೆ. ಯಾರಿಗೆ ಕೊನೆಯದಾಗಿ ಏನು ಸಿಗುತ್ತದೆ ಎಂದು ನೋಡಬೇಕಿದೆ. ಈ ನಡುವೆ ನಾನು ಆ ಜನರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಏಕೆಂದರೆ ಫೋನಿನಲ್ಲಿ ನೋಡಿದೆ ಹಾಗೂ ಥಿಯೇಟರ್ ನಲ್ಲಿ ನೋಡಿದೆ ಎಂದು ಹೇಳುತ್ತಾರೋ ಅದು ಅವರ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ. ಆ ರೀತಿಯ ಜನರನ್ನು ಕೂಡ ನಾನು ಸಂಪಾದಿಸಿದ್ದೇನೆ ಎಂದು ನನಗೆ ಖುಷಿ ಆಗುತ್ತಿದೆ. ನಿಮ್ಮ ಒಳ್ಳೆತನನೇ ನಿಮ್ಮನ್ನು ಕಾಪಾಡಬೇಕು. ನೀವು ಏನು ತಪ್ಪು ಮಾಡಿದ್ದೀರೋ ಅದು ನೀವು ಅನುಭವಿಸಿಯೇ ಇಲ್ಲಿಂದ ಹೋಗುವುದು. ನಾವೆಲ್ಲಾ ಇಲ್ಲಿ ವೀಕ್ಷಕರು. ನನ್ನಿಂದ ತಪ್ಪು ಆದರೆ ನಾನು ಕೂಡ ಅನುಭವಿಸುತ್ತೇನೆ ಎಂದು ಸುದೀಪ್ ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ಪೈಲ್ವಾನ್ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ನನಗೆ ತುಂಬಾ ಖುಷಿ ಇದೆ. ಏಕೆಂದರೆ ಸಿನಿಮಾ ನೋಡಿದವರು ಉಪಯೋಗಿಸುತ್ತಿರುವ ಪದಗಳು, ಅಕ್ಷರಗಳು ಹೊಗಳಿಕೆಯಾಗಿ ಬರುತ್ತಿರುವುದನ್ನು ಕೇಳುವುದಕ್ಕೆ ಖುಷಿಯಾಗುತ್ತಿದೆ. ಇದರಲ್ಲಿ ನಮ್ಮ ಶ್ರಮ ತುಂಬಾ ಇದೆ. ಎಲ್ಲರದರ ನಡುವೆ ಜನರು ಚಿತ್ರಮಂದಿರ ಮುಂದೆ ಹೋಗಿ ಸೆಲೆಬ್ರೇಶನ್ ಮಾಡಿದಾಗ ಅದನ್ನು ನೋಡುವುದಕ್ಕೆ ನನಗೆ ಖುಷಿ ಹಾಗೂ ಹೆಮ್ಮೆ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಚೆನ್ನಾಗಿದೆ. ಆದರೆ ಇನ್ನೂ ಚೆನ್ನಾಗಿ ಆಗಬೇಕಿತ್ತು. ಕೆಲವು ಅಡಚಣೆಗಳು ಆಗುತ್ತಿರುತ್ತಿವೆ. ಈಗ ಮನೆಯಲ್ಲಿಯೇ ಕುಳಿತುಕೊಂಡು ಸಿನಿಮಾ ನೋಡುವಂತೆ ಆಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿರುವ ಜನರ ಬಗ್ಗೆ ನನಗೆ ಖುಷಿಯಾಗುತ್ತದೆ. ಬ್ಯುಸಿನೆಸ್ ಪ್ರಕಾರ ಸಿನಿಮಾ ಇನ್ನೂ ಚೆನ್ನಾಗಿ ಆಗಬೇಕಿತ್ತು. ಈಗ ಸಿನಿಮಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ ಎಂದರು.