ಸಂಜೆ ಮನೆಯವರೊಂದಿಗೆ ಆಚೆ ಹೋದಾಗ ಸ್ನಾಕ್ಸ್, ಚಾಟ್ಸ್ ಮುಂತಾದವುಗಳನ್ನು ತಿನ್ನುತ್ತಾರೆ. ಅದರಲ್ಲೂ ಮಕ್ಕಳೊಂದಿಗೆ ಹೊರಗಡೆ ಹೋದರೆ ಮಕ್ಕಳು ಇವನ್ನೆಲ್ಲಾ ಕೇಳಿಯೇ ಕೇಳುತ್ತಾರೆ. ಹೆಚ್ಚಿನವರು ಮಸಾಲಪುರಿ, ಗೋಬಿ ಮುಂತಾದವುಗಳನ್ನು ತಿನ್ನುವುದು ರೂಢಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಗೋಬಿ ಪೆಪ್ಪರ್ ಡ್ರೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ
Advertisement
ಬೇಕಾಗುವ ಸಾಮಗ್ರಿಗಳು:
ಹೂಕೋಸು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮೈದಾ – 1 ಕಪ್
ಜೋಳದ ಹಿಟ್ಟು – ಮುಕ್ಕಾಲು ಕಪ್
ಅರಶಿಣ ಪೌಡರ್ – ಅರ್ಧ ಚಮಚ
ಪೆಪ್ಪರ್ ಪೌಡರ್ – 1 ಚಮಚ
ಎಣ್ಣೆ – 2 ಚಮಚ
ಜೀರಿಗೆ – ಅರ್ಧ ಚಮಚ
ಫೆನ್ನೆಲ್ – ಅರ್ಧ ಚಮಚ
ಕರಿಬೇವು – ಸ್ವಲ್ಪ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಬೆಳ್ಳುಳ್ಳಿ – 5
ಹೆಚ್ಚಿದ ಶುಂಠಿ – ಸ್ವಲ್ಪ
ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
ಜೀರಾ ಪೌಡರ್ – ಅರ್ಧ ಚಮಚ
ಟೊಮೆಟೊ ಸಾಸ್ – 2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹೆಚ್ಚಿದ ಹೂಕೋಸನ್ನು ಬಿಸಿನೀರಿಗೆ ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ಬಳಿಕ ನೀರಿನಿಂದ ಹೂಕೋಸು ಅನ್ನು ತೆಗೆದು ಪಕ್ಕಕ್ಕೆ ಇಡಿ.
* ಈಗ ಒಂದು ಬೌಲ್‌ನಲ್ಲಿ 1 ಕಪ್ ಮೈದಾ, ಮುಕ್ಕಾಲು ಕಪ್ ಜೋಳದ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಅದಕ್ಕೆ ಅರಶಿಣ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಅದಕ್ಕೆ 1 ಕಪ್ ನೀರನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಹೂಕೋಸನ್ನು ಈ ಮಿಶ್ರಣಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಶ್ರಣ ಹೂಕೋಸನ್ನು ಚನ್ನಾಗಿ ಹೊಂದಿಕೊಳ್ಳಬೇಕು.
* ನಂತರ ಒಂದು ಬಾಣಾಲೆಯಲ್ಲಿ ಎಣ್ಣೆಯನ್ನು ಬಿಸಿಗಿಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಹೂಕೋಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.
* ಈಗ ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ, ಜೀರಿಗೆ ಮತ್ತಿ ಫನ್ನೆಲ್ ಹಾಕಿಕೊಳ್ಳಿ. ಬಳಿಕ ಅದಕ್ಕೆ ಕರಿಬೇವುಗಳನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಕ್ಯಾಪ್ಸಿಕಂ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ಬಳಿಕ ಇದಕ್ಕೆ ಅರಶಿಣ ಪುಡಿ, ಜೀರಾ ಪುಡಿ, ಕೊತ್ತಂಬರಿ ಪುಡಿ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಈಗ ಇದಕ್ಕೆ ಸ್ವಲ್ಪ ಟೊಮೆಟೊ ಸಾಸ್ ಹಾಕಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ.
* ಈಗ ಈ ಮಿಶ್ರಣಕ್ಕೆ ಹುರಿದ ಗೋಬಿಯನ್ನು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಇದಕ್ಕೆ 2 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ರೆಸ್ಟೋರೆಂಟ್ ಶೈಲಿಯ ಶಾಹಿ ಪನೀರ್ ಮನೆಯಲ್ಲೇ ಮಾಡಿ!
Advertisement
Web Stories