ಭಾರತದ ಈ ಪಟ್ಟಣದಲ್ಲಿ ಗೋಬಿ ಮಂಚೂರಿ ನಿಷೇಧ – ಎಲ್ಲಿ?

Public TV
1 Min Read
Gobi manchuri

ಪಣಜಿ: ಗೋವಾ (Goa) ನಗರದ ಮಾಪುಸಾದಲ್ಲಿ (Mapusa) ಫಾಸ್ಟ್‌ಫುಡ್‌ನ ಪ್ರತ್ಯೇಕ ಡಿಶ್ ಗೋಬಿ ಮಂಚೂರಿಯನ್ (Gobi Manchurian) ಅನ್ನು ನಿಷೇಧ ಮಾಡಲಾಗಿದೆ.

ಗೋಬಿ ಮಂಚೂರಿಯನ್ ಅಂದರೆ ಯಾರಿಗೆ ಇಷ್ಟವಿಲ್ಲ. ಚಿಕ್ಕವರಿಂದ ಹಿಡಿದು ಎಲ್ಲರು ತಿನ್ನುವ ಅಹಾರ ಇದಾಗಿದೆ. ಇದನ್ನು ಸಾಮಾನ್ಯವಾಗಿ ಹೂಕೋಸು ಹಾಕಿ ಡೀಪ್ ಫ್ರೈ ಮಾಡಿ ಕೆಂಪು ಸಾಸ್ ಹಾಕಿ ತಯಾರಿಸಲಾಗುತ್ತದೆ. ಆಹಾರ ಪ್ರಿಯರಲ್ಲಿ ಬಹಳ ಹಿಂದಿನಿಂದಲೂ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿರುವ ಗೋಬಿ ಮಂಚೂರಿಯನ್ ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಅನುದಾನ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ತಾರತಮ್ಯ ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಇದರ ಸಂಶ್ಲೇಷಿತ ಬಣ್ಣ ಮತ್ತು ನೈರ್ಮಲ್ಯದ ಮೇಲಿನ ಕಾಳಜಿಯಿಂದ ಗೋವಾದ ನಗರವಾದ ಮಾಪುಸಾದಲ್ಲಿ ಗೋಬಿ ಮಂಚೂರಿಯನ್ ಅನ್ನು ಮಳಿಗೆಗಳಲ್ಲಿ ಮತ್ತು ಹಬ್ಬಗಳಲ್ಲಿ ಈ ಖಾದ್ಯವನ್ನು ನಿಷೇಧಿಸುವಂತೆ ಮಾಡಿದೆ. ಇದನ್ನೂ ಓದಿ:  ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

Gobi Manchurian 3

ಗೋಬಿ ಮಂಚೂರಿಯನ್ ಅನ್ನು ಬ್ಯಾನ್ ಮಾಡುವ ನಿರ್ಣಯ ಮಾಪುಸಾ ಮುನ್ಸಿಪಲ್ ಕೌನ್ಸಿಲ್‌ನದಲ್ಲ. ಕಳೆದ ಎರಡು ವರ್ಷಗಳ ಹಿಂದೆ 2022 ರಲ್ಲಿ ಶ್ರೀದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ ಮೊದಲು ಈ ನಿರ್ಧಾರ ತೆಗೆದುಕೊಂಡಿದ್ದರು. ಆಹಾರ ಮತ್ತು ಔಷಧಗಳ ಆಡಳಿತವು (FDA), ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್‌ಗೆ ಗೋಬಿ ಮಂಚೂರಿಯನ್ ಅನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳನ್ನು ನಿಷೇಧಿಸಲು ಸೂಚನೆ ನೀಡಿತು. ಗೋಬಿ ಮಂಚೂರಿಯನ್ ಮಾರಾಟ ಹೆಚ್ಚದಂತೆ ನೋಡಿಕೊಳ್ಳಲು ಸ್ಟಾಲ್‌ಗಳ ಮೇಲೆ ಎಫ್‌ಡಿಎ ದಾಳಿ ನಡೆಸಿತ್ತು. ಇದನ್ನೂ ಓದಿ: ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹುನ್ನಾರ: ಹರಿಪ್ರಸಾದ್ ವಾಗ್ದಾಳಿ

ಇದೀಗ ಗೋಬಿಯ ಸಂಶ್ಲೇಷಿತ ಬಣ್ಣದಿಂದ ಮತ್ತು ನೈರ್ಮಲ್ಯದ ಮೇಲಿನ ಕಾಳಜಿಯಿಂದ ಗೋವಾದ ಮಾಪುಸಾ ಪಟ್ಟಣದಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

Share This Article