– ಕೆಮಿಕಲ್ ಬಳಕೆ ಪತ್ತೆಯಾದ್ರೆ ಬ್ಯಾನ್ ಫಿಕ್ಸ್
ಬೆಂಗಳೂರು: ಗೋಬಿ ಆಯ್ತು, ಕಾಟನ್ ಕ್ಯಾಂಡಿ ಆಯ್ತು. ಈಗ ಕಬಾಬ್ (Kabab), ಪಾನಿಪುರಿಯನ್ನ ಟೆಸ್ಟ್‍ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ. ಬೆಂಗಳೂರಿನ ಹಲವು ಏರಿಯಾಗಳ ಕಬಾಬ್, ಪಾನಿಪುರಿ ಅಸುರಕ್ಷತೆಯನ್ನ ಪರಿಶೀಲಿಸಿ ಈ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ.
Advertisement
ಕಳೆದ ಕೆಲದಿನಗಳ ಹಿಂದಷ್ಟೆ ಆಹಾರ ಮತ್ತು ಸುರಕ್ಷತಾ ಇಲಾಖೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನ (Cotton Candy) ಪರೀಕ್ಷಿಸಿ ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆ ಮಾಡಿ ಕಲರ್‍ಗಳ ಬಳಕೆ ಮಾಡೋದನ್ನ ನಿಷೇಧ ಮಾಡಿದೆ. ಆರೋಗ್ಯ ಸಚಿವರು ಸಹ ಗೋಬಿಗೆ ಮೂರು ಬಗೆಯ ಕಲರ್‍ಗಳನ್ನ ಬಳಕೆ ಮಾಡಬಾರದು ಅಂತಾ ಆದೇಶ ಮಾಡಿದ್ದಾರೆ. ಈ ಬೆನ್ನಲ್ಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಕಬಾಬ್ ಮತ್ತು ಪಾನಿಪುರಿ ಬಳಕೆ ಮಾಡುತ್ತಿರುವ ಕಲರ್ ಮತ್ತು ಕಲಬೆರಕೆಯ ಬಗ್ಗೆ ತಪಾಸಣೆ ಮಾಡಲು ಮುಂದಾಗಿದೆ. ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?
Advertisement
Advertisement
ಬೆಂಗಳೂರಿನ ಪ್ರಮುಖ ಏರಿಯಾಗಳು, ಹೋಟೆಲ್‍ಗಳು ಮತ್ತು ಬೀದಿಬದಿ ವ್ಯಾಪಾರಗಳಿಂದ ಕಬಾಬ್ ಮತ್ತು ಪಾನಿಪುರಿ ಸಂಗ್ರಹಿಸಿ ಲ್ಯಾಬ್‍ಗೆ ಕಳಿಸಲಿದ್ದಾರೆ. ಅಸುರಕ್ಷತೆನಾ ಅಂತಾ ತಪಾಸಣೆ ಮಾಡಿ ಹಾನಿಕಾರಕ ಅಂಶಗಳನ್ನ ಪತ್ತೆ ಮಾಡಲಿದ್ದಾರೆ. ಇದರಲ್ಲೂ ಕ್ಯಾನ್ಸರ್ ಕಾರಕ, ಹಾನಿಕಾರಕ ಅಂಶಗಳು ಇದ್ದರೆ ಕೂಡಲೇ ಕಲರ್ ಬಳಕೆ ನೀಷೇಧ ಹೇರಿ ಕ್ರಮ ವಹಿಸುತ್ತಾರಂತೆ. ಈ ತಿಂಗಳ ಅಂತ್ಯಕ್ಕೆ ಟೆಸ್ಟಿಂಗ್ ರಿಪೋರ್ಟ್ ಹೊರಬರುತ್ತೆ ಅಂತಾ ಪಬ್ಲಿಕ್ ಟಿವಿಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಕಬಾಬ್, ಪಾನಿಪೂರಿ ತಯಾರಿಕೆಯಲ್ಲಿ ಸ್ವಚ್ಛತೆ ಇರಲ್ಲ ಅಂತಾ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೂಡ ಬಂದಿವೆ. ಈ ಮಧ್ಯೆ ಆಹಾರ& ಸುರಕ್ಷತಾ ಇಲಾಖೆ ಪರೀಕ್ಷೆಗೆ ಒಳಪಡಿಸಲು ಮುಂದಾಗಿರೋದು ಒಳ್ಳೆಯ ನಿರ್ಧಾರ.