ಗಾಂಧಿನಗರ: ಮೋರ್ಬಿಯಲ್ಲಿ ತೂಗು ಸೇತುವೆ (MorbiBridge) ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ (Narendra Modi) ಮತ್ತು ಗುಜರಾತ್ ಸರ್ಕಾರದ (Gujarat Government) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
India needs a PM, not a fashion designer.
What is f@@king happening now.
Most corrupted people are in power #Go_Back_Modi pic.twitter.com/GaK7hgM2a1
— Monu Verma (@MonuCyIITR) November 1, 2022
Advertisement
ತೂಗು ಸೇತುವೆ ಕುಸಿದು 135 ಮಂದಿ ಮೃತಪಟ್ಟಿದ್ದಾರೆ, ಅವರಲ್ಲಿ 47 ಮಕ್ಕಳಿದ್ದಾರೆ. ರಕ್ಷಣೆ ಮಾಡಿರುವ 100ಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಸಂತ್ರಸ್ತರನ್ನ ಭೇಟಿ ಮಾಡಲು ತೆರಳಿದ್ದಾರೆ. ಮೋರ್ಬಿ ಆಸ್ಪತ್ರೆಗೆ (Morbi Hospital) ಹಾಗೂ ತೂಗು ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆಯೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಮೋದಿ ಬರ್ತಾರೆ ಅಂತ ರಾತ್ರೋರಾತ್ರಿ ಆಸ್ಪತ್ರೆ ಕ್ಲೀನ್
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಾಟ್ ಮೋದಿ, ಬಾಯ್‌ಕಾಟ್ ಬಿಜೆಪಿ (BJP) ಹಾಗೂ ಗೋ ಬ್ಯಾಕ್ ಮೋದಿ (Go-Back-Modi) ಅಭಿಯಾನ ಆರಂಭಿಸಿದ್ದು, ತೀವ್ರವಾಗಿ ಖಂಡಿಸಿದ್ದಾರೆ. `ಭಾರತಕ್ಕೆ ಪ್ರಧಾನಿ ಬೇಕು, ಜೋಕರ್ ಬೇಡ, ಫ್ಯಾಷನ್ ಡಿಸೈನರ್ ಬೇಡ, ಪ್ರಧಾನಿ ಮೋದಿ ಅವಧಿಯಲ್ಲಿ ದೇಶದಲ್ಲೇ ಅತಿಹೆಚ್ಚು ಭ್ರಷ್ಟ ಅಧಿಕಾರಿಗಳಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್
Advertisement
#Go_Back_Modi
Shooting soon… where is the artist? pic.twitter.com/zGTDX7nN1K
— Paulraj N (@AcnPaulraj) November 1, 2022
ಗುಜರಾತಿನಲ್ಲಿ ನಡೆದ ದುರಂತದಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ನಿಮ್ಮ ಗಮನ ಮಾತ್ರ ಚುನಾವಣೆಯ ಮೇಲಿದೆ. ಇದು ಮೋದಿ ಅವರಿಗೆ ನಾಚಿಗೇಡಿನ ಸಂಗತಿ ಎಂದು ಕಿಡಿ ಕಾರಿದ್ದಾರಲ್ಲದೇ ಪ್ರಾಣ ಕಳೆದುಕೊಂಡವರಿಂದಾಗಿ ಅವರಿಗೆ 134 ಮತಗಳು ನಷ್ಟವಾಗಿದೆ ಎಂಬ ಚಿಂತೆ ಅವರಿಗಿದೆ ಎಂದು ಟೀಕಿಸಿದ್ದಾರೆ.
ನಮಗೆ ಪ್ರಧಾನಿ ಬೇಕಾಗಿದೆಯೇ ಹೊರತು ಸ್ವಂತ ದೇಶದ ಜನರ ಜೀವಗಳ ಜೊತೆ ಚೆಲ್ಲಾಟ ಆಡೋರು ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.