ChikkaballapurCrimeDistrictsKarnatakaLatestMain Post

ಮನೆಗೆ ಹೊರಭಾಗದಿಂದ ಚಿಲಕ ಹಾಕಿ ಮೇಕೆಗಳನ್ನು ಕದ್ದೊಯ್ದ ಕಳ್ಳರು

ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಕಳ್ಳರು ಮನೆಯಿಂದ ಯಾರು ಹೊರಬಾರದಂತೆ ಹೊರಭಾಗದಿಂದ ಚಿಲಕ ಹಾಕಿ ಮನೆ ಮುಂದೆ ಕೊಟ್ಟಿಗೆಯಲ್ಲಿದ್ದ ಮೇಕೆಗಳನ್ನು ಕದ್ದೊಯ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪ್ರವೀಣ್ ಕುಮಾರ್ ಎಂಬುವವರ ಮನೆಗೆ ಚಿಲಕ ಹಾಕಿ ಮನೆಯಿಂದ ಯಾರೂ ಹೊರಗೆ ಬಾರದಂತೆ ತಡೆದಿರುವ ಕಳ್ಳರು ಮನೆಯ ಮುಂದೆ ಕೊಟ್ಟಿಗೆಯಲ್ಲಿ ಇದ್ದ 5 ಮೇಕೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

ಮುಂಜಾನೆ 3 ಗಂಟೆ ಸುಮಾರಿಗೆ ಕಳವು ಆಗಿದ್ದು. ಪ್ರವೀಣ್ ಕುಮಾರ್ ಮೇಕೆಗಳ ಅರಚಾಟ ಕೇಳಿ ಎಚ್ಚರಗೊಂಡರೂ ಮನೆಯ ಹೊರಗಡೆ ಚಿಲಕ ಹಾಕಿದ್ದ ಕಾರಣ ಹೊರಗೆ ಬರಲಾಗಿಲ್ಲ. ಇನ್ನೂ ಅಕ್ಕ ಪಕ್ಕದವರಿಗೆ ಕರೆ ಮಾಡಿದ್ರೂ ಮುಂಜಾನೆ ನಿದ್ದೆಯಲ್ಲಿದ್ದವರು ಕರೆ ಸ್ವೀಕರಿಸಿಲ್ಲ. ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಕಳ್ಳರು 1 ಲಕ್ಷ ಮೌಲ್ಯದ 5 ಮೇಕೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಉಡುಪಿಯ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ

Leave a Reply

Your email address will not be published.

Back to top button