ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ಬೆನ್ನಲ್ಲೇ ಮಹದಾಯಿ ಯೋಜನೆಗೆ (Mahadayi Project) ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ.
ಗೋವಾ (Goa) ಸರ್ಕಾರದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಮಹದಾಯಿ `ಪ್ರವಾಹ'(Progressive River Authority For Water and Harmony) ತಂಡ ರಚಿಸಿದೆ ಎಂಬ ಆರೋಪ ಕೇಳಿಬಂದಿದೆ. ನಮ್ಮ ಸರ್ಕಾರದ ಒತ್ತಡ ಕಾರಣ ಪ್ರವಾಹ್ ತಂಡ ನಾಳೆ ಕಣಕುಂಬಿ ಸೇರಿ ಮಹದಾಯಿ ಜಲಾನಯನ ಪ್ರದೇಶಕ್ಕೆ ಭೇಟಿ ಕೊಡಲಿದೆ ಎಂದು ಸಿಎಂ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾ ಸೋಂಕು – ಕೇರಳದಲ್ಲಿ 4ನೇ ಪ್ರಕರಣ ಪತ್ತೆ
Advertisement
Advertisement
ಆದರೆ, ಗೋವಾ ಸರ್ಕಾರದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರ ರಚನೆ `ಪ್ರವಾಹ’ ಆಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಇದು ಎಲ್ಲಾ ಜಲವಿವಾದಗಳಿಗೆ ಸಂಬಂಧಿಸಿದ ತಂಡ ಅಷ್ಟೇ ಎಂದಿದ್ದಾರೆ.
Advertisement
Advertisement
ಕಳಸಾ-ಬಂಡೂರಿ ತಿರುವು ಯೋಜನೆಗೆ ಯಾವುದೇ ಅಡ್ಡಿಪಡಿಸುವ ಕೆಲಸ ಆಗಿಲ್ಲ. ಗೋವಾ ಸರ್ಕಾರದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರದಿಂದ `ಪ್ರವಾಹ’ ರಚನೆ ಆಗಿಲ್ಲ. ಎಲ್ಲ ಜಲವಿವಾದಕ್ಕೆ ಸಂಬಂಧಿಸಿದ ಪ್ರವಾಹ ತಂಡ ಅಷ್ಟೇ. ಇದೊಂದು Progressive River Authority For Water and Harmony ತಂಡ. ಜುಲೈ 7ರಂದು ಮಹದಾಯಿ ಜಲಾನಯನಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸುತ್ತದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮುಂದಾಳತ್ವ ವಹಿಸಿಲ್ಲ ಎಂದು ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ ಪ್ರಕರಣ – ಪ್ರಮುಖ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ