ಗೋವಾ ಸ್ಟೈಲ್‌ನ ಮಾವಿನಕಾಯಿ, ಒಣ ಸಿಗಡಿ ಕರಿ – ಸಖತ್ ರುಚಿ ಈ ರೆಸಿಪಿ

Public TV
2 Min Read
Dry Shrimp Curry with Mango 2

ಪ್ರತಿ ಬಾರಿ ಮನೆಯಲ್ಲಿ ನಾನ್‌ವೆಜ್ ಅಡುಗೆ ಮಾಡಲು ಬಯಸಿದಾಗ ಮಾರುಕಟ್ಟೆಗೆ ಹೋಗಬೇಕಾಗುವುದು ಅನಿವಾರ್ಯ. ಆದರೆ ಅಡುಗೆ ಮನೆಯಲ್ಲಿ ಯಾವಾಗಲೂ ಒಂದಷ್ಟು ಒಣ ಮೀನುಗಳನ್ನು ಇಟ್ಟುಕೊಂಡರೆ ಇಂತಹ ಸನ್ನಿವೇಶಗಳನ್ನು ತಪ್ಪಿಸಬಹುದು ಅಲ್ವಾ? ನಾವಿಂದು ಸಖತ್ ರುಚಿಯಾದ ಗೋವಾ ಸ್ಟೈಲ್‌ನ ಮಾವಿನಕಾಯಿ ಹಾಗೂ ಒಣ ಸಿಗಡಿ ಕರಿ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೀವು ಕೂಡಾ ಅಡುಗೆ ಮನೆಯಲ್ಲಿ ಒಂದಷ್ಟು ಒಣ ಸಿಗಡಿ ಮೀನನ್ನು ಸಂಗ್ರಹಿಸಿಟ್ಟಾಗಿ ಈ ರೆಸಿಪಿಯನ್ನು ಖಂಡಿತಾ ಟ್ರೈ ಮಾಡಿ.

Dry Shrimp Curry with Mango

ಬೇಕಾಗುವ ಪದಾರ್ಥಗಳು:
ಪೇಸ್ಟ್ ತಯಾರಿಸಲು:
ತೆಂಗಿನ ತುರಿ – ಅರ್ಧ
ಕಾಶ್ಮೀರಿ ಮೆಣಸಿನಕಾಯಿ – 5
ಕೊತ್ತಂಬರಿ ಬೀಜ – ಒಂದೂವರೆ ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಬೆಳ್ಳುಳ್ಳಿ – 5
ಈರುಳ್ಳಿ – ಅರ್ಧ
ನೀರು – 2 ಟೀಸ್ಪೂನ್
ಕರಿ ತಯಾರಿಸಲು:
ಒಣ ಸಿಗಡಿ – 150 ಗ್ರಾಂ
ತೆಂಗಿನ ಎಣ್ಣೆ – 1 ಟೀಸ್ಪೂನ್
ಹೆಚ್ಚಿದ ಈರುಳ್ಳಿ – ಅರ್ಧ
ಸೀಳಿದ ಹಸಿರು ಮೆಣಸಿನಕಾಯಿ – 2
ನೀರು – 2 ಕಪ್
ಆಲೂಗಡ್ಡೆ – 1
ಉಪ್ಪು – ರುಚಿಗೆ ತಕ್ಕಷ್ಟು
ಕತ್ತರಿಸಿದ ಹಸಿ ಮಾವಿನಕಾಯಿ – 1
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಕೋಲ್ಕತ್ತಾ ಸ್ಟ್ರೀಟ್ ಫುಡ್ ಎಗ್ ದಾಲ್ ತಡ್ಕಾ – ನೀವೊಮ್ಮೆ ಟ್ರೈ ಮಾಡ್ಲೇಬೇಕು

Dry Shrimp Curry with Mango 1

ಮಾಡುವ ವಿಧಾನ:
* ಮೊದಲಿಗೆ ಪೇಸ್ಟ್ ತಯಾರಿಸಲು ಬೇಕಾದ ಎಲ್ಲಾ ಪದಾರ್ಥಗಳನ್ನು ಗ್ರೈಂಡರ್‌ಗೆ ಹಾಕಿ ಒರಟಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
* ಸ್ವಲ್ಪ ನೀರು ಸೇರಿಸಿ ನಯವಾದ ಮಿಶ್ರಣವಾಗುವವರೆಗೆ ರುಬ್ಬಿಕೊಳ್ಳಿ.
* ಒಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
* ಈಗ ರುಬ್ಬಿಟ್ಟಿದ್ದ ಮಸಾಲೆಯನ್ನು ಸೇರಿಸಿ ಕಡಿಮೆ ಉರಿಯಲ್ಲಿ 2-3 ನಿಮಿಷ ಹುರಿದುಕೊಳ್ಳಿ.
* ಒಣ ಸಿಗಡಿ ಮೀನನ್ನು ಮೊದಲೇ ತೊಳೆದು ಸ್ವಚ್ಛಗೊಳಿಸಿ ಈಗ ಕಡಾಯಿಗೆ ಹಾಕಿ, ಅದಕ್ಕೆ ಹಸಿರು ಮೆಣಸಿನಕಾಯಿ, ಕತ್ತರಿಸಿದ ಆಲೂಗಡ್ಡೆ, ಹಸಿ ಮಾವಿನಕಾಯಿ, ನೀರು ಸೇರಿಸಿ ಕಡಿಮೆ ಉರಿಯಲ್ಲಿ ಮುಚ್ಚಿ ಬೇಯಿಸಿಕೊಳ್ಳಿ.
* ಈಗ ಉಪ್ಪು ಹಾಕಿ ಮಿಶ್ರಣ ಮಾಡಿ ಬಳಿಕ ಕೊತ್ತಂಬರಿ ಸೊಪ್ಪನ್ನು ಸೇರಿಸಿ 3-4 ನಿಮಿಷ ಮುಚ್ಚಳ ಹಾಕದೆ ಬೇಯಿಸಿಕೊಳ್ಳಿ.
* ಇದೀಗ ಗೋವಾ ಶೈಲಿಯ ಮಾವಿನಕಾಯಿ, ಒಣ ಸಿಗಡಿ ಕರಿ ತಯಾರಾಗಿದ್ದು, ಇದನ್ನು ಬಿಸಿಬಿಸಿಯಾಗಿ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: 7 ಲೇಯರ್ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

Share This Article