ಪಣಜಿ: ಉತ್ತರ ಗೋವಾದ ಮೊರ್ಜಿಮ್ ನಲ್ಲಿ ‘ಬೆತ್ತಲೆ ಪಾರ್ಟಿ’ ನಡೆಯುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರೈವೇಟ್ ಗೋವಾ ಪಾರ್ಟಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಗೋವಾ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪೊಲೀಸರು ಈಗ ಈ ಪಾರ್ಟಿ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Advertisement
ಈ ಕುರಿತು ಹೆಚ್ಚಿನ ವಿವರ ಪಡೆಯಲು ಪೊಲೀಸರು ತಮ್ಮ ಮಾಹಿತಿ ಜಾಲವನ್ನು ಚುರುಕುಗೊಳಿಸಿದ್ದು, ಪಾರ್ಟಿ ನಡೆಯುವ ಸಾಧ್ಯತೆ ಇರುವ ಕುರಿತು ಉತ್ತರ ಗೋವಾ ಜಿಲ್ಲೆಯ ಮೂರು ರಸ್ತೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ವಿವರವಾದ ವಿಳಾಸ ಅಥವಾ ದಿನಾಂಕವನ್ನು ಪೋಸ್ಟರ್‍ನಲ್ಲಿ ಹಾಕಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement
Advertisement
10-15 ವಿದೇಶಿಯರು ಹಾಗೂ 10ಕ್ಕೂ ಹೆಚ್ಚು ಭಾರತೀಯ ಹುಡುಗಿಯರು ಭಾಗವಹಿಸಲಿದ್ದಾರೆ ಎಂದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ. ಆದರೆ ರಾಜ್ಯದಲ್ಲಿ ಯಾವುದೇ ಬೆತ್ತಲೆ ಪಾರ್ಟಿ ನಡೆಯಲು ನಾವು ಬಿಡುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
Advertisement
ಈ ಕುರಿತು ಗೋವಾ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಮಾ ಕೌಂಟಿನ್ಹೋ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಪ್ರವಾಸೋದ್ಯಮ ಸಚಿವ ಮನೋಹರ್ ಅಜ್ಗಾಂವ್ಕರ್ ಕೂಡಲೇ ಮಧ್ಯೆ ಪ್ರವೇಶಿಸಿ ಅಂತಹ ಪಾರ್ಟಿಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.