ನವದೆಹಲಿ: ಐರಿಷ್-ಬ್ರಿಟಿಷ್ ಪ್ರವಾಸಿ (Irish Tourist) ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ವಿಕಾಸ್ ಭಗತ್‌ಗೆ ಸುಮಾರು 8 ವರ್ಷಗಳ ಬಳಿಕ ಗೋವಾ ಕೋರ್ಟ್ (Goa Court) ಕಠಿಣ ಶಿಕ್ಷೆ ವಿಧಿಸಿದೆ. ಅಪರಾಧಿ ವಿಕಾಸ್ 2017ರಲ್ಲಿ ಎಸಗಿದ ಕೃತ್ಯಕ್ಕಾಗಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಅಂತಿಮ ತೀರ್ಪು ಪ್ರಕಟಿಸಿದೆ.
2017ರ ಮಾರ್ಚ್ ತಿಂಗಳಲ್ಲಿ 28 ವರ್ಷ ವಯಸ್ಸಿನ ಐರಿಷ್-ಬ್ರಿಟಿಷ್ ಯುವತಿ ಗೋವಾ ಪ್ರವಾಸಕ್ಕೆ ಬಂದಿದ್ದರು. ಮಾರ್ಚ್ 14ರಂದು ದಕ್ಷಿಣ ಗೋವಾದ ಕ್ಯಾನಕೋನಾ ಗ್ರಾಮದ (Canacona village) ಅರಣ್ಯ ಪ್ರದೇಶದಲ್ಲಿ ಪ್ರವಾಸಿ ಯುವತಿಯ ಶವ ಕೊಲೆ ಮತ್ತು ಅತ್ಯಾಚಾರ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಶುಕ್ರವಾರ ಅಪರಾಧಿ ಎಂದು ಘೋಷಿಸಿತ್ತು. ಇಂದು ಶಿಕ್ಷೆ ಪ್ರಕಟ ಮಾಡಿತು. ಇದನ್ನೂ ಓದಿ: ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡನೆ – ಸಿದ್ದರಾಮಯ್ಯ
ಶುಕ್ರವಾರ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಸಂತ್ರಸ್ತೆ ಕುಟುಂಬಸ್ಥರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ಡೇನಿಯಲ್ (ಸಂತ್ರಸ್ತೆ ಹೆಸರು ಬದಲಾಯಿಸಲಾಗಿದೆ) ನಮ್ಮ ಮಗಳಿದ್ದಂತೆ, ಆಕೆಯ ಪರ ನ್ಯಾಯಕ್ಕಾಗಿ ಹೋರಾಡಿದ ಎಲ್ಲರಿಗೂ ಧನ್ಯವಾದಗಳು, ನಾವು ಕೃತಜ್ಞರಾಗಿರುತ್ತೇವೆ ಎಂದು ಭಾವುರಾಗಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ
ಏನಿದು ಕೇಸ್?
2017ರ ಮಾರ್ಚ್‌ನಲ್ಲಿ ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ 28 ವರ್ಷದ ಸಂತ್ರಸ್ತೆಯ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಒಂದು ತುಂಡು ಬಟ್ಟೆ ಸಹ ಇಲ್ಲದೇ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ತಲೆ ಮತ್ತು ಮುಖದ ಭಾಗ ಗಾಯಗೊಂಡ ಸ್ಥಿತಿಯಲ್ಲಿತ್ತು. ಈ ಸಂಬಂಧ ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದರು.
ಸಂತ್ರಸ್ತೆ ಪರ ವಕೀಲ ವಿಕಾಸ್ ವರ್ಮಾ ವಾದ ಮಂಡಿಸಿದರು. ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಫೋರೆನ್ಸಿಕ್ ವರದಿಗಳು ದೃಢಪಡಿಸಿವೆ. ಅತ್ಯಾಚಾರ ಎಸಗಿದ ಬಳಿಕ ಆಕೆಯ ಮುಖವನ್ನು ಬಿಯರ್ ಬಾಟಲಿಯಿಂದ ಜಜ್ಜಿದ್ದಾರೆ. ಈ ಕೃತ್ಯಕ್ಕೆ ಯಾವುದೇ ಕಾರಣಕ್ಕೂ ಕ್ಷಮೆ ನೀಡದಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಇದನ್ನೂ ಓದಿ: Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ