ಬೆಳಗಾವಿ: ನಕಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸೃಷ್ಟಿಸಿ ಅದರಲ್ಲಿ ಗೋವಾ ಮದ್ಯದ (Goa Liquor) ಬಾಕ್ಸ್‌ಗಳನ್ನು ತುಂಬಿಕೊಂಡು ಬರುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ (Excise Department) ಅಧಿಕಾರಿಗಳು ಹಿರೇಬಾಗೇವಾಡಿ ಬಳಿ ಬಂಧಿಸಿದ್ದಾರೆ.
Advertisement
ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಮೂಲದ ಶ್ರೀಧರ್ ಎಂದು ಗುರುತಿಸಲಾಗಿದೆ. ಆರೋಪಿ ಐಷರ್ ವಾಹನದಲ್ಲಿ ನೋಡಲು ಟ್ರಾನ್ಸ್‌ಫಾರ್ಮರ್‌ನಂತೆ ಕಾಣುವ ಎರಡು ಪೆಟ್ಟಿಗೆಯನ್ನು ಸಿದ್ಧಪಡಿಸಿದ್ದಾನೆ. ಬಳಿಕ ಅದರಲ್ಲಿ ಗೋವಾ ಮದ್ಯವನ್ನು ತುಂಬಿಸಿಕೊಂಡು ಬಂದಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಹಿಂದಿನ ಕೊಲೆ ಪ್ರಕರಣ – ಮೃತ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!
Advertisement
Advertisement
ಕಳೆದ 15 ದಿನಗಳಿಂದ ಈ ರೀತಿ ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಇತ್ತು. ನಮ್ಮ ಸಿಬ್ಬಂದಿ ವಾಹನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಈಗ ಖಚಿತ ಮಾಹಿತಿ ಮೇರೆಗೆ ವಾಹನವನ್ನು ವಶಪಡಿಸಿಕೊಂಡಿದ್ದೇವೆ. ಗೋವಾದಿಂದ ಕರ್ನಾಟಕ ಮಾರ್ಗವಾಗಿ ತೆಲಂಗಾಣಕ್ಕೆ (Telangana) ಈ ಮದ್ಯ ಸಾಗಾಟ ಆಗುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ಅಬಕಾರಿ ಜಂಟಿ ಆಯುಕ್ತ ಮಂಜುನಾಥ ಹೇಳಿದ್ದಾರೆ.
Advertisement
ಕಳೆದ ಬಾರಿ ಫ್ಲೈವುಡ್ ಶೀಟ್‍ನಲ್ಲಿ ಮದ್ಯ ಇಟ್ಟು ಸಾಗಾಟ ಮಾಡಿದ್ದರು. ಇದು ಎಲ್ಲಿಂದ ಖರೀದಿ ಆಗಿದೆ ಎನ್ನುವುದು ಕಂಡು ಹಿಡಿಯುವುದು ಕಷ್ಟ. ವಾಹನವನ್ನು ಜಿಪಿಎಸ್ ಮೂಲಕ ಆನ್ ಆಂಡ್ ಆಫ್ ಮಾಡುವ ಮೂಲಕ ಆರೋಪಿಗಳಿಗೆ ಅಧಿಕಾರಿಗಳಿಗೆ ಶಾಕ್ ನೀಡಿದ್ದರು. ನಾವು ವಾಹನ ಹಿಡಿದ ತಕ್ಷಣ ಜಿಪಿಎಸ್ ಮೂಲಕ ವಾಹನವನ್ನು ಆಫ್ ಮಾಡಿದ್ದರು. ನಂತರ ಜಿಪಿಎಸ್ ಡಿಸ್ಕ್ ಕನೆಕ್ಟ್ ಮಾಡಿ ವಾಹನ ಜಪ್ತಿ ಮಾಡಿದ್ದೆವು. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತೇವೆ. ಅಬಕಾರಿ ಡಿಸಿ ವಿಜಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ FIR ದಾಖಲು
Web Stories