ಬೆಂಗಳೂರು: ಮಹದಾಯಿ ನೀರನ್ನು ಗೋವಾಗೆ ಹರಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕನ್ನಡ ಪರ ಸಂಘಟನೆಗಳು ಕಾಂಗ್ರೆಸ್ ನಾಯಕರ ಮನೆಗಳಿಗೆ ಮುತ್ತಿಗೆ ಹಾಕಿವೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಮನೆಗೆ ಮುತ್ತಿಗೆ ಹಾಕಿರುವ ಕನ್ನಡ ಪರ ಸಂಘಟನೆಗಳು ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತಿದೆ. ಇಲ್ಲಿ ಕಾಂಗ್ರೆಸ್ ಕಾವೇರಿಗಾಗಿ ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡುತ್ತದೆ. ಗೋವಾದಲ್ಲಿ ಮಹದಾಯಿಯನ್ನು ಅವರಿಗೆ ನೀಡುವ ಭರವಸೆ ನೀಡಿದೆ ಎಂದು ಕಿಡಿಕಾರಿದೆ.
Advertisement
Advertisement
ಸಿದ್ದರಾಮಯ್ಯ ಮನೆ ಮುಂದೆ ಹೈಡ್ರಾಮಾ: ಸಿದ್ದರಾಮಯ್ಯನ ಮನೆ ಮುಂದೆ ಮುತ್ತಿಗೆ ಹಾಕಿದ ಪ್ರತಿಭಟನಾ ಮುಖಂಡರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಹೊಯ್ಸಳ ವಾಹನಕ್ಕೆ ಪ್ರತಿಭಟನಾಕಾರರು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಮಹಿಳಾ ಕಾರ್ಯಕರ್ತರು ಹೊಯ್ಸಳ ಕಾರಿಗೆ ಅಡ್ಡ ನಿಂತಿರು.
Advertisement
ಈ ಬಗ್ಗೆ ಕನ್ನಡಪರ ಸಂಘಟನೆಯ ರವಿಶೆಟ್ಟಿ ಮಾತನಾಡಿ, ಇವತ್ತು ಕಾಂಗ್ರೆಸ್ ಇಬ್ಬಗೆ ನೀತಿ ಪಾಲಿಸುತ್ತಿದೆ. ಗೋವಾ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡಲ್ಲ ಎಂದು ಉಲ್ಲೇಖಿಸಿದೆ. ಇಲ್ಲಿ ಸಿದ್ದರಾಮಯ್ಯ, ಡಿಕೆಶಿ ನೀರಿಗಾಗಿ ಹೈಟೆಕ್ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಕರ್ನಾಟಕ ವೋಟು ಬ್ಯಾಂಕ್ ನಿಮಗೆ ಆಗಿದೆ. ಗೋವಾ, ಕರ್ನಾಟಕದಲ್ಲಿ ಬೇರೆ ಬೇರೆ ಕಾಂಗ್ರೆಸ್ ಇದ್ಯಾ ಎಂದು ಪ್ರಶ್ನಿಸಿದ ಅವರು, ವೋಟಿಗಾಗಿ ಬೇರೆ ಬೇರೆ ನೀತಿ ಅನುಸರಿಸುತ್ತಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬ ಮಾಡಿ: ಮೋದಿ
Advertisement
ಕಾಂಗ್ರೆಸ್‍ನವರು ಮೇಕೆದಾಟು, ಮಹಾದಾಯಿ ವಿಚಾರ ಬಾಯಿ ಬಿಡುವ ನೈತಿಕತೆ ಕಳೆದುಕೊಂಡಿದ್ದೀರಿ. ನೀವು ಯಾವ ಕಾರ್ಯಕ್ರಮಕ್ಕೆ ಹೋದರೂ ಕಪ್ಪು ಬಟ್ಟೆ ಧರಿಸಿ ಧರಣಿ ಮುಂದುವರಿಸುತ್ತೇವೆ. ಕಾಂಗ್ರೆಸ್ ಪಾದಯಾತ್ರೆ ಇನ್ನು ಮುಂದೆ ಮಾಡಿದರೆ ನಾವು ತಡೆಯುವ ಪಾದಯಾತ್ರೆ ಹೋರಾಟ ಇನ್ನು ಮುಂದೆ ಮಾಡುತ್ತೇವೆ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅಗತ್ಯ ಬಿದ್ದರೆ ಬೊಗಳುತ್ತೇನೆ, ಇಲ್ಲವೇ ಕಚ್ಚುತ್ತೇನೆ: ಹರೀಶ್ ರಾವತ್
ಬೇರೆ ಬೇರೆ ಕಾಂಗ್ರೆಸ್ ನಾಯಕರ ಮನೆ ಮುಂದೆ ಧರಣಿ ತಡೆಯಲು ಪೊಲೀಸರು ಮುಂದಾಗಿದ್ದು, ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಸ್ತುತ ಬಿಜೆಪಿ ಸರ್ಕಾರವು ಮಹದಾಯಿ ನದಿಯನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ನೀಡಿದೆ. ನದಿ ನೀರನ್ನು ಮರಳಿ ಪಡೆಯುತ್ತೇವೆ. ಕರ್ನಾಟಕಕ್ಕೆ ನೀರನ್ನು ಹರಿಸಲು ಬಿಡುವುದಿಲ್ಲ. ಮಹಾದಾಯಿ ಹೋರಾಟಕ್ಕಾಗಿ ಖ್ಯಾತ ವಕೀಲರ ದಂಡೇ ತೊಡಗಿಕೊಳ್ಳಲಿದೆ ಎಂದು ಶುಕ್ರವಾರ ರಾಹುಲ್ ಗಾಂಧಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿದೆ.