ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಕಿಡಿಕಾರಿದರು.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗೋವಾವನ್ನು ವಿಮೋಚನೆ ಮಾಡಲು ನೆಹರೂ ಅವರು ಸರಿಯಾದ ಸಮಯದಲ್ಲಿ ಮಧ್ಯ ಪ್ರವೇಶಿಸಿದ್ದರು. ಈ ಬಗ್ಗೆ ನೆಹರೂ ಅವರು ಗೋವಾ ಜನರ ಅಭಿಪ್ರಾಯ ಸಂಗ್ರಹಿಸಿದ್ದರು. ಆದರೆ ಪ್ರಧಾನಿ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಾರಣದಿಂದಾಗಿ ಗೋವಾ ವಿಮೋಚನೆ ವಿಳಂಬವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಮೋದಿ ಹಾಗೂ ಶಾಗೆ ಎರಡನೇ ಮಹಾಯುದ್ಧದ ನಂತರದ ಪ್ರಪಂಚದ ಇತಿಹಾಸ ತಿಳಿದಿಲ್ಲ. ಅವರಿಗೆ ಸ್ವಾತಂತ್ರ್ಯ ನಂತರದ ಭಾರತದ ಇತಿಹಾಸವೂ ತಿಳಿದಿಲ್ಲ. ಗೋವಾವನ್ನು ಮುಕ್ತಗೊಳಿಸಲು ನೆಹರೂ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದರು. ಇದರಿಂದಾಗಿಯೇ ಮಿಲಿಟರಿ ಕ್ರಮದ ವಿರುದ್ಧ ಯಾರೂ ಒಂದೇ ಒಂದು ಧ್ವನಿ ಎತ್ತಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜರ ವಂಶವನ್ನು ನಾಶ ಮಾಡಲು ಹೋದ ಟಿಪ್ಪು ಸುಲ್ತಾನ್ ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ
Advertisement
Advertisement
ಈ ಬಾರಿ ನಡೆಯುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರ ಮಾಡಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪಕ್ಷಕ್ಕೆ ಈಗ ಉತ್ತಮ ಕಾವಲು ಇದೆ. ಕಳ್ಳರು ಹೊರಹೋಗಿದ್ದಾರೆ. ಅವರಿಗೆಲ್ಲಾ ಜನರು ತಕ್ಕ ಬುದ್ಧಿ ಕಲಿಸುತ್ತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: 30 ಗುಂಟೆ ಜಮೀನು ಮಾರಾಟ – 2 ಗುಂಪುಗಳ ನಡುವೆ ಮಾರಾಮಾರಿ