ಪಣಜಿ: ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ನಾಯಕರು ಪರಸ್ಪರ ಕೆಸರೆರೆಚಾಟ ನಡೆಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ʼಚೋಟಾ ಮೋದಿʼ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದರು. ಅವರ ಟೀಕೆಗೆ ಕೇಜ್ರಿವಾಲ್ ಪ್ರತಿದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ನಾನು ರಾಜಕೀಯಕ್ಕೆ ಬರುವ ಅಗತ್ಯವಿರುತ್ತಿರಲಿಲ್ಲ ಎಂದು ಕೇಜ್ರಿವಾಲ್ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣಾ ಅಖಾಡಕ್ಕೆ ಯೋಗಿ – ಮೊದಲ ಬಾರಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ
Advertisement
Advertisement
ಕನಸಿನಲ್ಲೂ ಸುರ್ಜೇವಾಲ ಅವರು ನನ್ನನ್ನು ದೆವ್ವದಂತೆ ಕಾಣುತ್ತಾರೆ. ದಿನದ 24 ಗಂಟೆಯೂ ನಾನು ಅವರ ಮನಸ್ಸಿನಲ್ಲಿದ್ದೇನೆ. ಅವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
Advertisement
ರಾಹುಲ್ ಗಾಂಧಿ ಅವರು ನಮ್ಮ ಒಳ್ಳೆಯ ಕಾರ್ಯಗಳನ್ನು ಅನುಸರಿಸಲಿ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ಜಾರಿಗೊಳಿಸಲಿ. ಕಾಂಗ್ರೆಸ್ ಒಳ್ಳೆಯ ಕೆಲಸಗಳನ್ನು ಮಾಡಲಿ. ಆಗ ನಾನು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತವನ್ನು 2 ವಿಭಾಗವಾಗಿ ವಿಂಗಡಿಸಲಾಗಿದೆ: ರಾಹುಲ್ ಗಾಂಧಿ
Advertisement
ಅರವಿಂದ್ ಕೇಜ್ರಿವಾಲ್ ʼಚೋಟಾ ಮೋದಿʼ ಆಗಿದ್ದು, ಬಿಜೆಪಿ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ಪ್ರಧಾನಿ ಮೋದಿ ಅವರ ರಾಜಕೀಯ ತದ್ರೂಪಿ ಆಗಿರುವ ಕೇಜ್ರಿವಾಲ್, ಅವರದ್ದೇ ನಡವಳಿಕೆ ಹಾಗೂ ಸರ್ವಾಧಿಕಾರ ಧೋರಣೆ ಹೊಂದಿದ್ದಾರೆ ಎಂದು ಸುರ್ಜೇವಾಲ ಟೀಕಿಸಿದ್ದರು.