ಬಡವರಿಗೆ ಸಹಾಯ ಮಾಡಬಾರದೇ?- ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

Public TV
1 Min Read
priyanka gandhi

ಪಣಜಿ: ಕೊರೊನಾ ಮೊದಲನೆ ಅಲೆಯಲ್ಲಿ ವಲಸೆ ಹೋಗುತ್ತಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಇದರಿಂದ ಕಾಂಗ್ರೆಸ್‌ನಿಂದ ಸಹಾಯ ಮಾಡಿದೆವು. ಆದರೆ ಮೋದಿ ಅವರು ಇದರಿಂದಲೇ ಕೋವಿಡ್ ಹೆಚ್ಚುತ್ತಿದೆ ಎನ್ನುತ್ತಿದ್ದಾರೆ. ಅವರು ಏನು ಬಯಸಿದ್ದರು, ಅವರಿಗೆ ಯಾರು ಸಹಾಯ ಮಾಡಬಾರದು ಎಂದು ಬಯಸಿದ್ದರೇ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದರು.

ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಕಾಂಗ್ರೆಸ್ ಹಾಗೂ ದೆಹಲಿ ಸರ್ಕಾರವು ವಲಸೆ ಕಾರ್ಮಿಕರಿಗೆ ಹೊರಹೊಗಲು ಉಚಿತ ಟಿಕೆಟ್ ನೀಡಿತ್ತು. ಇದರಿಂದಾಗಿ ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಕೋವಿಡ್ ವೇಗವಾಗಿ ಹರಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

PRIYANKA gandhi

ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಅವರು ನಡೆಸಿದ ರ‍್ಯಾಲಿಯಿಂದ ಕೊರೊನಾ ಹೆಚ್ಚಾಗಲಿಲ್ಲವೇ, ಆ ಸಮಯದಲ್ಲಿ ಭಾರದಲ್ಲಿ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿತ್ತು ಎಂದು ಟೀಕಿಸಿದರು.

ಗೋವಾದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಗಾಗಿ 500 ಕೋಟಿ ರೂ.ವನ್ನು ಒದಗಿಸಲಾಗುವುದು ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೆ.30ರಷ್ಟನ್ನು ಮಹಿಳೆಯರಿಗೆ ಮೀಸಲು ಇರಿಸಲಾಗುವುದು ಎಂದರು. ಇದನ್ನೂ ಓದಿ: ಧರ್ಮವನ್ನು ಮನೆಗಳಲ್ಲಿ ಆಚರಿಸಿ, ಶಿಕ್ಷಣಕ್ಕೆ ತರಬೇಡಿ: ಸುರಯ್ಯ ಅಂಜುಮ್

priyanka gandhi

ಸರ್ಕಾರಿ ಉದ್ಯೋಗದ ನೇಮಕಾತಿಯ ಹಗರಣಗಳನ್ನು ತಡೆಯಲು ಸಿಬ್ಬಂದಿ ಆಯ್ಕೆ ಆಯೋಗವನ್ನು ರಚಿಸಲಾಗುವುದು. ದುರ್ಬಲ ವರ್ಗಗಳ ಕುಟುಂಬಗಳಿಗೆ ತಿಂಗಳಿಗೆ 6,೦೦೦ ನೀಡುವ ನ್ಯಾಯ ಯೋಜನೆಯನ್ನೂ ಜಾರಿ ಮಾಡಲಾಗುವುದು. ಇದು ಕುಟುಂಬಗಳಿಗೆ ನೆರವಾಗುವುದಲ್ಲದೆ, ಅರ್ಥ ವ್ಯವಸ್ಥೆಗೆ ಹಣ ಹರಿದು ಬರುವಂತೆಯೂ ಮಾಡಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಲವಂತವಾಗಿ ಬಿಜೆಪಿಗೆ ಮತ ಹಾಕಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಅಖಿಲೇಶ್ ಆಗ್ರಹ

ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಬಲ ಪೈಪೋಟಿಯಲ್ಲಿದೆ. ಮೊದಲ ಬಾರಿಗೆ ಗೋವಾ ಚುನಾವಣೆಯಲ್ಲಿ ಆಪ್ ಹಾಗೂ ಸಮಾಜವಾದಿ ಪಕ್ಷ ಸ್ಪರ್ಧೆ ನಡೆಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *