ಪಣಜಿ: ಪಂಜಾಬ್‌ನಲ್ಲಿ ಸರ್ಕಾರ ರಚನೆಗೆ ಸಜ್ಜಾಗಿರುವ ಆಮ್ ಆದ್ಮಿ ಪಕ್ಷ (AAP) ದಕ್ಷಿಣ ಗೋವಾದ ಎರಡು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಗೋವಾ ವಿಧಾನಸಭೆಗೆ ಎಂಟ್ರಿ ಕೊಟ್ಟಿದೆ.
ಎಎಪಿ 2017ರಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ಸ್ಪರ್ಧಿಸಿದಾಗ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ವೆಲಿಮ್ ಮತ್ತು ಬೆನೌಲಿಮ್ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ. ಇದನ್ನೂ ಓದಿ: ಮನೋಹರ್ ಪರಿಕ್ಕರ್ ಅಣ್ಣ ನಗುತ್ತಿರಬಹುದು- ಗೋವಾ ಸಿಎಂ ಪತ್ನಿ
ಬೆನೌಲಿಮ್‌ನಲ್ಲಿ ಎಎಪಿ ಅಭ್ಯರ್ಥಿ ವೆಂಜಿ ವಿಗಾಸ್ ಅವರು ತೃಣಮೂಲ ಕಾಂಗ್ರೆಸ್‌ನ ಚರ್ಚಿಲ್ ಅಲೆಮಾವೊ ವಿರುದ್ಧ 1,271 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವೆಲಿಮ್ ಕ್ಷೇತ್ರದಲ್ಲಿ ಕ್ರೂಜ್ ಸಿಲ್ವಾ ಅವರು ಕಾಂಗ್ರೆಸ್‌ನ ಸವಿಯೋ ಡಿಸಿಲ್ವಾ ವಿರುದ್ಧ 169 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಇಬ್ಬರೂ ಅಭ್ಯರ್ಥಿಗಳಿಗೆ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ
ಮಾಪುಸಾದಿಂದ ಸ್ಪರ್ಧಿಸಿದ್ದ ಎಎಪಿ ಅಭ್ಯರ್ಥಿ ಮಾಂಬ್ರೆ, ಸೇಂಟ್ ಕ್ರೂಜ್‌ನಿಂದ ಸ್ಪರ್ಧಿಸಿದ್ದ ಅಮಿತ್ ಪಾಲೇಕರ್ ಮತ್ತು ವಕೀಲೆ ಪ್ರತಿಮಾ ಕೌಟಿನೋ ಸೇರಿದಂತೆ ಎಎಪಿ ಇತರೆ ಪ್ರಮುಖ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.