ಪಣಜಿ: ಕರ್ನಾಟಕದ ಮೀನು ವ್ಯಾಪಾರಿಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಆಹಾರ ಸುರಕ್ಷತಾ ನಿಯಮ ಪಾಲಿಸುವ ವ್ಯಾಪಾರಿಗಳಿಂದ ಮೀನು ಖರೀದಿಸಬಹುದು ಎಂದು ಹೇಳುವ ಮೂಲಕ ಗೋವಾ ಸರ್ಕಾರ ಹಿಂದಿನ ಆದೇಶವನ್ನು ಸಡಿಲಗೊಳಿಸಿದೆ.
ಲೈಸನ್ಸ್ ಹೊಂದಿರುವ ಹಾಗೂ ಆಹಾರ ಸುರಕ್ಷತಾ ನಿಯಮ ಪಾಲಿಸುವ ಹೊರರಾಜ್ಯದ ವ್ಯಾಪಾರಿಗಳಿಂದ ಮೀನು ಖರೀದಿಸಬಹುದು ಎಂದು ಗೋವಾ ಸರ್ಕಾರ ತಿಳಿಸಿದೆ. ಈ ಮೂಲಕ ಹೊರರಾಜ್ಯಗಳಿಂದ ಮೀನು ತರಿಸಿಕೊಳ್ಳುವ ಅವಕಾಶ ಗೋವಾ ವ್ಯಾಪಾರಿಗಳಿಗೆ ಸಿಗಲಿದೆ.
Advertisement
ತಾವು ಪೂರೈಸುವ ಮೀನು ಫಾರ್ಮಲಿನ್ ಅಂಶ ಹೊಂದಿಲ್ಲ ಎಂದು ಕರ್ನಾಟಕ ಮೀನು ರಫ್ತುಗಾರರು ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೋವಾ ಸರ್ಕಾರವು, ಫಾರ್ಮಲಿನ್ ಪರೀಕ್ಷೆ ನಡೆಸಿ ಮೀನನ್ನು ತರಿಸಿಕೊಳ್ಳಲು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ. ಇದನ್ನು ಓದಿ: 50ಕ್ಕೂ ಹೆಚ್ಚು ಮೀನಿನ ಲಾರಿಗೆ ಪೊಲೀಸರಿಂದ ತಡೆ
Advertisement
Advertisement
ಏನಿದು ಪ್ರಕರಣ?:
ಫಾರ್ಮಲಿನ್ ರಾಸಾಯಲಿಕ ಪತ್ತೆಯಾಗಿದ್ದರಿಂದ ಹೊರರಾಜ್ಯಗಳಿಂದ ಮೀನು ಆಮದನ್ನು ಗೋವಾ ಸರ್ಕಾರವು ಜುಲೈ ತಿಂಗಳಿನಿಂದ ನಿರ್ಬಂಧಿಸಿತ್ತು. ಅಷ್ಟೇ ಅಲ್ಲದೇ ಮಂಗಳವಾರ ಅಧಿಕೃತ ಆದೇಶವನ್ನು ಹೊರಡಿಸಿತ್ತು. ನಿರ್ಬಂಧದಿಂದಾಗಿ ಕರ್ನಾಟಕದ ಮೀನುಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಬಿಸಿ ಮುಟ್ಟಿತ್ತು. ಇದರಿಂದಾಗಿ ಕರ್ನಾಟಕದ ಮೀನುಗಾರರನ್ನು ಗುರಿಯಾಗಿಸಿಕೊಂಡು ಮೀನು ಲಾರಿಗಳನ್ನು ಗೋವಾ-ಕಾರವಾರದ ಗಡಿಭಾಗದಲ್ಲಿ ತಡೆದು ನಿಲ್ಲಿಸಲಾಗಿತ್ತು. ಗೋವಾಕ್ಕೆ ಆಮದು ಆಗುತ್ತಿದ್ದ ಮೀನಿನ ಮೇಲೆ ಸಂಪೂರ್ಣ ನಿರ್ಬಂಧ ಹೊರಡಿಸಿದ್ದರಿಂದ ರಾಜ್ಯದ ಮೀನು ಬೆಳೆಗಾರರು ಭಾರೀ ನಷ್ಟ ಎದುರಿಸಿದ್ದರು. ಇದನ್ನು ಓದಿ: ಮೀನು ತಿನ್ನೋರಿಗೆ ಗುಡ್ ನ್ಯೂಸ್ – ಲ್ಯಾಬ್ ಟೆಸ್ಟ್ ನಲ್ಲಿ ಪಾಸಾದ ಸಾಗರ ರಾಣಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews