LatestMain PostNational

ಇಂಡಿಗೋ ವಿಮಾನದ ಅಡಿಯಲ್ಲಿ ಗೋ ಫಸ್ಟ್‌ನ ಕಾರು ಪಾರ್ಕ್ – ತನಿಖೆಗೆ ಆದೇಶ

Advertisements

ನವದೆಹಲಿ: ಗೋ ಫಸ್ಟ್ ಏರ್‌ಲೈನ್‌ಗೆ ಸೇರಿದ ಕಾರನ್ನು ಮಂಗಳವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಇಂಡಿಗೋ ವಿಮಾನ ಮೂತಿಯ ಅಡಿಯಲ್ಲಿ ಪಾರ್ಕ್ ಮಾಡಿದ್ದು, ಅದು ವಿಮಾನದ ಮುಂದಿನ ಚಕ್ರಕ್ಕೆ ತಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಂದು ಬೆಳಗ್ಗೆ ಪಾಟ್ನಾಗೆ ಹೋಗಬೇಕಿದ್ದ ಇಂಡಿಗೋ ಎ320 ವಿಮಾನವನ್ನು ದೆಹಲಿ ನಿಲ್ದಾಣದ ಟಿ2 ಟರ್ಮಿನಲ್‌ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಏಕಾಏಕಿ ಬಂದ ಗೋ ಫಸ್ಟ್ ಏರ್‌ಲೈನ್‌ಗೆ ಸೇರಿದ ಕಾರು ವಿಮಾನದ ಮೂತಿಯ ಅಡಿಯಲ್ಲಿ ನಿಂತಿದೆ. ವಿಮಾನದ ಚಕ್ರಕ್ಕೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಭಿಮಾನಿಯಿಂದ ಒಂದೂವರೆ ಕೆ.ಜಿ ತೂಕದ ಬೆಳ್ಳಿ ಮೂರ್ತಿ ಗಿಫ್ಟ್!

ಕಾರು ಚಾಲಕ ಈ ರೀತಿಯಾಗಿ ವರ್ತಿಸಲು ಕಾರಣವೇನು ಎಂದು ತಿಳಿಯಲು ತನಿಖೆ ಕೈಗೊಳ್ಳುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ(ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ. ಕಾರು ಚಾಲಕ ಮದ್ಯ ಸೇವನೆ ಮಾಡಿಲ್ಲ ಎಂಬುದನ್ನೂ ದೃಢಪಡಿಸಲಾಗಿದೆ. ಸದ್ಯ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಇಂಡಿಗೋ ತಿಳಿಸಿದೆ. ಇದನ್ನೂ ಓದಿ: Commonwealth Games: ಆಂಗ್ಲರ ವಿರುದ್ಧ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತದ ಹಾಕಿ ತಂಡ

ಘಟನೆಯ ಕುರಿತು ಇಂಡಿಗೋ ಅಥವಾ ಗೋ ಫಸ್ಟ್ ಯಾವುದೇ ಹೇಳಿಕೆ ನೀಡಿಲ್ಲ. ಪಾಟ್ನಾಗೆ ಹೋಗಬೇಕಿದ್ದ ವಿಮಾನ ನಿಗದಿತ ಸಮಯಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

Live Tv

Leave a Reply

Your email address will not be published.

Back to top button