ರಾಯಚೂರು: ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವಿರೋಧಿಸಿ ರಾಯಚೂರಿನ ಸಿಂಧನೂರು ನಗರದಲ್ಲಿ ರೈತರು ಹಾಗೂ ಪ್ರಗತಿಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಗೋಬ್ಯಾಕ್ ಟ್ರಂಪ್ ಅನ್ನೋ ಬ್ಯಾನರ್ ಹಿಡಿದು ಪ್ರತಿಭಟನಾಕಾರರು ಘೋಷಣೆಗಳನ್ನ ಕೂಗಿದರು. ನಗರದ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಗಾಂಧಿ ವೃತ್ತದಲ್ಲಿ ಟ್ರಂಪ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಟ್ರಂಪ್ ಭಾರತಕ್ಕೆ ಭೇಟಿ ಸಮಯದಲ್ಲಿ ಹೈನುಗಾರಿಕೆ, ಕೋಳಿಮಾಂಸ ಮತ್ತು ಆಟೋಮೊಬೈಲ್ ಒಪ್ಪಂದ ಸಂಭವ ಹಿನ್ನೆಲೆ ರೈತರು ಆಕ್ರೋಶಗೊಂಡಿದ್ದಾರೆ. ಒಪ್ಪಂದ ರೈತರ ಮತ್ತು ಭಾರತ ಅರ್ಥ ವ್ಯವಸ್ಥೆಗೆ ವಿರೋಧಿಯಾಗಿದ್ದು.ಈ ಒಪ್ಪಂದವನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಗೋಬ್ಯಾಕ್ ಟ್ರಂಪ್ ಹೋರಾಟ ನಡೆಸಿದರು.
ಅಮೆರಿಕದ ಹಾಲು, ಚಿಕನ್ ನಮಗೆ ಬೇಕಾಗಿಲ್ಲ. ಭಾರತದ ರೈತರು ದಿವಾಳಿಯಾಗಲು ಬಿಡುವುದಿಲ್ಲ. ಲೂಟಿಕೋರರಿಗೆ ಭಾರತ ಮಾರಾಟಕ್ಕಿಲ್ಲ ಅಂತ ರೈತರು ಸೇರಿದಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು.