-ಸಿದ್ದು ಪ್ರಮಾಣಿಕರಾಗಿದ್ರೆ ಸಿಬಿಐ ತನಿಖೆಗೆ ಕೊಡಲಿ ಎಂದು ಒತ್ತಾಯ
ಮೈಸೂರು: ಮುಡಾ ಕೇಸಲ್ಲಿ (MUDA Case) ಸಿಎಂ ಸಿದ್ದರಾಮಯ್ಯ ಮೈಸೂರು ಲೋಕಾಯುಕ್ತಕ್ಕೆ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಇತ್ತ ಬಿಜೆಪಿ ಪ್ರತಿಭಟನೆ ಅಸ್ತç ಪ್ರಯೋಗಿಸಿದೆ. ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರ ವಾಹನವನ್ನು ಕೂಡ ಸೀಜ್ ಮಾಡಿದರು. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಶಾಸಕ ಶ್ರೀವತ್ಸ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಲೋಕಾಯುಕ್ತ ತನಿಖೆಯಿಂದ ಏನೂ ಆಗಲ್ಲ. ಸಿದ್ದರಾಮಯ್ಯ (CM Siddaramaiah) ಪ್ರಮಾಣಿಕರಾಗಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೇಸರಿಪಡೆ ಆಗ್ರಹಿಸಿದೆ. ಸಿಎಂ ನನ್ನದು ತೆರೆದ ಪುಸ್ತಕ ಅಂತಾರೆ. ಹಾಗಾಗಿ ಸಿಬಿಐ ತನಿಖೆಗೆ ಕೊಡಲಿ. ಸತ್ಯಾಸತ್ಯತೆ ಹೊರಗೆ ಬರಲಿ ಅಂತಾ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ನೋಡ್ರಿ ನಾನು ಸಿಎಂ ಅಂತಾ ಅಂಜಿಕೆ ಇಡ್ಕೋಬೇಡಿ: ಸಾಮಾನ್ಯ ವ್ಯಕ್ತಿಯಂತೆ ವಿಚಾರಣೆ ಎದುರಿಸಿದ ಸಿದ್ದರಾಮಯ್ಯ
ಅಷ್ಟೇ ಅಲ್ಲದೇ ಇವರೇ ಮೊದಲೇ ಟೈಮ್ ಫಿಕ್ಸ್ ಮಾಡಿಕೊಂಡು ವಿಚಾರಣೆಗೆ ಹೋಗಿದ್ದಾರೆ. ಇದೇನು ಮ್ಯಾಚ್ ಫಿಕ್ಸಿಂಗ್ ಕೇಸಾ? ತನಿಖಾಧಿಕಾರಿಗಳು ಎಷ್ಟು ಹೊತ್ತು ವಿಚಾರಣೆ ನಡೆಸುತ್ತಾರೆ ಅಂತ ಇವರಿಗೆ ಗೊತ್ತಾ? ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರುಂಡ, ಮುಂಡ ಬೇರ್ಪಡಿಸಿ ಹತ್ಯೆ- 3 ದಿನಗಳ ಬಳಿಕ ರುಂಡ ಪತ್ತೆ
ಸಿಎಂ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ (Congress) ನಾಯಕರು ಆರೋಪಿಸಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ಆಗಲಿ. ಸಿಎಂ ದೋಷಮುಕ್ತರಾಗಿ ಬರುವ ಭರವಸೆ ಇದೆ. ಇದೆಲ್ಲ ರಾಜಕೀಯ ಷಡ್ಯಂತ್ರ. ನಾವೆಲ್ಲ ಸಿಎಂ ಜೊತೆಗೆ ಇದ್ದೇವೆ, ಬಿಜೆಪಿಯವರು ರಾಜಕೀಯ ಮಾಡಲಿ. ಬಣ್ಣ-ಸುಣ್ಣ ಬಳಿಯಲಿ, ಅವರ ಪ್ರಯತ್ನ ಸಫಲ ಆಗಲ್ಲ ಅಂತ ಬಿಜೆಪಿಗರಿಗೆ ಸಚಿವೆ ಲಕ್ಮಿ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: LMV ಲೈಸೈನ್ಸ್ ಹೊಂದಿರುವ ಚಾಲಕರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹ: ಸುಪ್ರೀಂ
ಕಾಂಗ್ರೆಸ್ ಮತ್ತು ಬಿಜೆಪಿ (BJP) ಮಧ್ಯೆ ಮುಡಾ ದಂಗಲ್ ತಾರಕಕ್ಕೇರಿದೆ. ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: MUDA Case; ಸತತ 2 ಗಂಟೆ ವಿಚಾರಣೆ; ಸಿಎಂ ಸಿದ್ದರಾಮಯ್ಯಗೆ 40 ಕ್ಕೂ ಹೆಚ್ಚು ಪ್ರಶ್ನೆಗಳು