– ಬೆಂಗಳೂರಿನ ಕಪ್ಪಣ್ಣ ತವರಿಗೆ ಆಗಮನ
– ಜನರಲ್ ಮೋಟಾರ್ಸ್ ಕಂಪನಿಯಿಂದ ವಜಾ
ಫ್ರಾಂಕ್ಫರ್ಟ್: ಜರ್ಮನಿಯ ಪ್ರಖ್ಯಾತ ಆಟೋಮೊಬೈಲ್ ಕಂಪನಿ ಫೋಕ್ಸ್ವ್ಯಾಗನ್ ಡೀಸೆಲ್ ಕಾರುಗಳು ಹೆಚ್ಚು ಮಾಲಿನ್ಯ ಉಂಟು ಮಾಡುವ ವಿಷಯವನ್ನು ಬಚ್ಚಿಡಲು ಎಂಜಿನ್ಗೆ ರಹಸ್ಯ ಸಾಫ್ಟ್ ವೇರ್ವೊಂದನ್ನು ಅಳವಡಿಸಿದ್ದ ವಿಚಾರವನ್ನು ಬಯಲಿಗೆಳೆದ ಕನ್ನಡಿಗ ಸದ್ಯ ಕೆಲಸ ಕಳೆದುಕೊಂಡಿದ್ದಾರೆ.
ದುರಾದೃಷ್ಟವಶಾತ್ ಫೋಕ್ಸ್ವ್ಯಾಗನ್ ಅಕ್ರಮ ಬಯಲು ಮಾಡಿದ್ದ ಬೆಂಗಳೂರಿನ ಕಪ್ಪಣ್ಣ(41) ಈಗ ನಿರುದ್ಯೋಗಿಯಾಗಿದ್ದಾರೆ. ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಕಂಪನಿ ತನ್ನ ಕೈಬಿಟ್ಟ ಬಳಿಕ ತವರಿನತ್ತ ಹೇಮಂತ್ ಕಪ್ಪಣ್ಣ ಮುಖ ಮಾಡಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಅಮೆರಿಕದ ಜನರಲ್ ಮೋಟರ್ಸ್ ಕಂಪನಿ ಕಳೆದ ಫೆಬ್ರವರಿಯಲ್ಲೇ ಹೇಮಂತ್ ಕಪ್ಪಣ್ಣ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಕಪ್ಪಣ್ಣ ಅವರನ್ನು ಕೆಲಸದಿಂದ ತೆಗೆದಿದ್ದಕ್ಕೂ ಫೋಕ್ಸ್ವ್ಯಾಗನ್ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜನರಲ್ ಮೋಟರ್ಸ್ ಹೇಳಿದೆ.
Advertisement
ಕಪ್ಪಣ್ಣ ಅವರು 17 ವರ್ಷಗಳಿಂದ ಅಮೆರಿಕದಲ್ಲಿದ್ದು, 2014ರ ಡಿಸೆಂಬರ್ ನಲ್ಲಿ ತಮ್ಮ ಪಿಎಚ್ಡಿ ಮುಗಿದ ಬಳಿಕ ಜನರಲ್ ಮೋಟರ್ಸ್ ಕಂಪನಿಗೆ ಸೇರ್ಪಡೆಯಾಗಿದ್ದರು. ಜನರಲ್ ಮೋಟರ್ಸ್ ಕಂಪನಿ ಕಪ್ಪಣ್ಣ ಅವರನ್ನು ಸೇರಿದಂತೆ 4 ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದೆ. ಕೆಲಸ ಕಳೆದುಕೊಂಡ ಬಳಿಕ 60 ದಿನಗಳವರೆಗೆ ಹೇಮಂತ್ ವೀಸಾ ಅವಧಿ ಇತ್ತು. ಅಷ್ಟರೊಳಗೆ ಹೊಸ ಕೆಲಸ ಸಿಗದ ಕಾರಣ ಅವರು ಬೆಂಗಳೂರಿಗೆ ಮರಳಿದ್ದಾರೆ ಎಂದು ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಕಪ್ಪಣ್ಣ ಅವರು ಸರ್ಕಾರ ನಿಯಮಗಳಿಗೆ ಬದ್ಧರಾಗಿರುತ್ತಾರೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದೆಯಾ ಎಂಬ ಅನುಮಾನ ಹುಟ್ಟುಕೊಂಡಿದೆ. ಅಲ್ಲದೆ ಅಮೆರಿಕದಲ್ಲಿ ಅವರಿಗೆ ಕೆಲಸ ಸಿಗದ ಕಾರಣ ಮತ್ತು ವೀಸಾ ಅವಧಿ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಕಪ್ಪಣ್ಣ ಅವರು ಬೆಂಗಳೂರಿಗೆ ಮರಳಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.
ಏನಿದು ಪ್ರಕರಣ?
ಜರ್ಮನಿ ಮೂಲದ ಫೋಕ್ಸ್ವ್ಯಾಗನ್ ಕಂಪನಿ ವಿಶ್ವದ ಹಲವು ದೇಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಅಮೆರಿಕದ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಆ ದೇಶಕ್ಕೂ ಕಾರುಗಳನ್ನು ಫೋಕ್ಸ್ವ್ಯಾಗನ್ ಪೂರೈಕೆ ಮಾಡುತ್ತಿತ್ತು. ಆದರೆ 2013ರಲ್ಲಿ ಹೇಮಂತ್ ಕಪ್ಪಣ್ಣ ಅವರ ತಂಡ ಸಂಶೋಧನೆ ನಡೆಸಿದಾಗ ಫೋಕ್ಸ್ವ್ಯಾಗನ್ ಕಂಪನಿಯ ಕಾರಿನ ಎಂಜಿನ್ಗಳಲ್ಲಿ ರಹಸ್ಯ ಸಾಫ್ಟ್ ವೇರ್ವೊಂದು ಇರುವುದು ಪತ್ತೆಯಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಈ ಸಾಫ್ಟ್ ವೇರ್ ಕಾರಿನ ಮಾಲಿನ್ಯ ಪ್ರಮಾಣ ಕಡಿಮೆ ಇರುವಂತೆ ತೋರಿಸುತ್ತಿತ್ತು. ಅಲ್ಲದೆ ಅಮೆರಿಕ ಅನುಮತಿಸಿರುವ ಮಾಲಿನ್ಯ ಮಿತಿಗಿಂತ ಹೆಚ್ಚಿನ ಪ್ರಮಾಣವನ್ನು ಹೊಗೆಯನ್ನು ಉಗುಳುತ್ತಿರುವ ಅಂಶ ಬಯಲಾಗಿತ್ತು. ಈ ಹಗರಣ ಬೆಳಕಿಗೆ ಬಂದ ಬಳಿಕ ಫೋಕ್ಸ್ವ್ಯಾಗನ್ ಕಂಪನಿ 2.2 ಲಕ್ಷ ಕೋಟಿ ರು.ಗಳಷ್ಟು ದಂಡವನ್ನು ಅಮೇರಿಕಾಕ್ಕೆ ಪಾವತಿಸಿತ್ತು.