ನವದೆಹಲಿ: ಇಂದು ಅಕ್ರಮ ಸಂಬಂಧಗಳು ವೈವಾಹಿಕ ಜೀವನವನ್ನು ಹಾಳು ಮಾಡುತ್ತಿರುವ ಸಮಯದಲ್ಲೇ ವಿವಾಹೇತರ ಸಂಬಂಧ (Extra Marital Relationship) ಬೆಸೆಯುವ ಗ್ಲೀಡನ್ (Gleeden) ಆ್ಯಪ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು (Indians) ನೊಂದಾಯಿಸಿಕೊಂಡಿದ್ದು ಅದರಲ್ಲೂ ಬೆಂಗಳೂರು (Bengaluru) ಮೊದಲ ಸ್ಥಾನದಲ್ಲಿದೆ.
ವಿಶ್ವದ ಅತಿದೊಡ್ಡ ವಿವಾಹೇತರ ಡೇಟಿಂಗ್ (Dating Application) ಪ್ಲಾಟ್‌ಫಾರ್ಮ್ ಗ್ಲೀಡನ್ ಬಿಡುಗಡೆ ಮಾಡಿರುವ ವರದಿಯಂತೆ 2024 ರಲ್ಲಿ ಅಪ್ಲಿಕೇಶನ್ ತನ್ನ ಬಳಕೆದಾರರ ಸಂಖ್ಯೆಯಲ್ಲಿ 270% ರಷ್ಟು ಏರಿಕೆ ಕಂಡಿದೆ. ಹೊಸ ಬಳಕೆದಾರರ ಪೈಕಿ 128% ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಒಟ್ಟು ಬಳಕೆದಾರರ ಪೈಕಿ 40% ರಷ್ಟು ಮಂದಿ 30 ರಿಂದ 45 ವಯಸ್ಸಿನ ವಿವಾಹಿತ ಸ್ತ್ರೀಯರಿದ್ದಾರೆ ಎಂದು ತಿಳಿಸಿದೆ.
Advertisement
ಎಲ್ಲಿ ಎಷ್ಟು?
ಗ್ಲೀಡನ್ ಬಳಕೆದಾರರ ಸಂಖ್ಯೆಯಲ್ಲಿ ಬೆಂಗಳೂರು 20% ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ(19%), ಕೋಲ್ಕತ್ತಾ (18%), ದೆಹಲಿ (15%) ಇದೆ. ಬಳಕೆದಾರರ ಪೈಕಿ 58% ರಷ್ಟು ಮಂದಿ ಮಹಿಳೆಯರಿದ್ದಾರೆ. ಇವರು ಸುಮಾರು 45 ನಿಮಿಷಗಳ ಕಾಲ ಈ ಆ್ಯಪ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ.
Advertisement
ಮೆಟ್ರೋ ನಗರಗಳು ಗರಿಷ್ಠ ಬಳಕೆದಾರರನ್ನು ಹೊಂದಿದ್ದರೂ ಭೋಪಾಲ್, ವಡೋದರಾ ಮತ್ತು ಕೊಚ್ಚಿಯಂತಹ ಸಣ್ಣ ನಗರಗಳಿಂದ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಗ್ಲೀಡನ್ ಭಾರತದಲ್ಲಿ 50 ಲಕ್ಷ ಗ್ರಾಹಕರನ್ನು ತಲುಪುವ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಭವ್ಯಾ ಮೇಲೆ ನಿಜವಾಗಲೂ ಲವ್ ಆಗಿದ್ಯಾ?- ತ್ರಿವಿಕ್ರಮ್ ಹೇಳೋದೇನು?
Advertisement
ಭಾರತದಲ್ಲಿ ಮದುವೆ ತನ್ನದೇ ಆದ ಪಾವಿತ್ರ್ಯತೆ ಇದೆ. ಕುಟುಂಬ ವ್ಯವಸ್ಥೆಗೂ ಗೌರವ ಇದೆ. ಈ ರೀತಿಯ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಈ ಬೆಳವಣಿಗೆಯ ಬಗ್ಗೆ ಗ್ಲೀಡನ್‌ನ ಭಾರತದ ವ್ಯವಸ್ಥಾಪಕಿ ಸಿಬಿಲ್ ಶಿಡ್ಡೆಲ್ ಪ್ರತಿಕ್ರಿಯಿಸಿ, ಭಾರತದಲ್ಲಿ 3 ಮಿಲಿಯನ್ ಬಳಕೆದಾರರನ್ನು ತಲುಪಿರುವುದು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಗೆ ಸಾಕ್ಷಿ. ಮಹಿಳಾ ಬಳಕೆದಾರರ ಹೆಚ್ಚುತ್ತಿರುವ ಆಸಕ್ತಿಯು ಇಂದಿನ ಜಗತ್ತಿನಲ್ಲಿ ಸುರಕ್ಷತೆ ಮತ್ತು ಆಯ್ಕೆಯ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವ ವೇದಿಕೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
Advertisement