– ನನ್ನ ಕೈಯಲ್ಲಿ ಅಧಿಕಾರಿಗಳು ಸಿಕ್ಕಿ ಹಾಕಿಕೊಳ್ಳುವುದಿಲ್ವಾ?
ರಾಮನಗರ: ಇಳಿವಯಸ್ಸಲ್ಲೂ ದೇವೇಗೌಡರಿಗೆ (H.D Devegowda) ಕೊಡಬಾರದ ನೋವು ಕೊಡ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ (Channapatna) ಮಾತನಾಡಿದ ಅವರು, ನಮ್ಮನ್ನು ಮುಗಿಸಲು ಏನೇನೋ ಕೆಲಸ ಮಾಡ್ತಾರೆ. ಇಳಿವಯಸ್ಸಿನಲ್ಲಿಯೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ. ಮಕ್ಕಳು ತಪ್ಪು ಮಾಡಿದ್ರೆ ದೊಡ್ಡವರು ಏನು ಮಾಡ್ತಾರೆ? ನಿಮ್ಮ ಮನೆಯಲ್ಲಿ ಮಕ್ಕಳಿಲ್ವಾ? ಇದರಲ್ಲಿ ದೇವೇಗೌಡರಿಗೆ ಪ್ರಶ್ನೆ ಮಾಡ್ತೀರಿ. ಅವನ್ಯಾರೋ ಮಾಧ್ಯಮದವನು ದೇವೇಗೌಡರಿಗೆ ಏಕವಚನದಲ್ಲಿ ಮಾತನಾಡ್ತಾನೆ ಎಂದು ಅವರು ಹರಿಹಾಯ್ದಿದ್ದಾರೆ. ಈ ಮೂಲಕ ಭಾಷಣದಲ್ಲಿ ಪರೋಕ್ಷವಾಗಿ ಸೂರಜ್ ರೇವಣ್ಣ ಅವರ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಗಣಿಗಾರಿಕೆಗೆ ಸಹಿ ಹಾಕಿರೋದು ಸರ್ಕಾರದ ಸಂಸ್ಥೆ, ಅವರು ಕಿಕ್‌ಬ್ಯಾಕ್ ನೀಡಲ್ಲ: ರಾಜ್ಯ ಸರ್ಕಾರದ ವಿರುದ್ಧ ಸಿಟಿ ರವಿ ಕಿಡಿ
ಇದ್ಯಾವುದಕ್ಕೂ ನಾವು ಕುಗ್ಗಲ್ಲ. ನಮ್ಮ ಅಧಿಕಾರಿಗಳು ಗುಲಾಮರಾಗಿ ಕೆಲಸ ಮಾಡಲು ಇತಿಮಿತಿ ಇದೆ. ನಾವೇನು ನಾಳೆಯೇ ರಾಜಕೀಯ ನಿವೃತ್ತಿ ಹೊಂದಲ್ಲ. ನನ್ನ ಕೈಯಲ್ಲಿ ಅಧಿಕಾರಿಗಳು ಸಿಕ್ಕಿ ಹಾಕಿಕೊಳ್ಳುವುದಿಲ್ವಾ? ನಾನು ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಇವತ್ತಲ್ಲ ನಾಳೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ದುರಹಂಕಾರದಲ್ಲೇ ಈ ಮಾತನ್ನ ಹೇಳುತ್ತಿದ್ದೇನೆ ಎಂದುಕೊಳ್ಳಿ. ಈ ಇಬ್ಬರು ಮಹಾನುಭಾವರು ಏನು ಮಾಡ್ತಿದ್ದಾರೆ ಗೊತ್ತಿದೆ. ಅಧಿಕಾರಿಗಳು ಈ ಗುಲಾಮತನ ಬಿಟ್ಟು, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ರಾಜ್ಯದ ಅಧಿಕಾರಿಗಳಿಗೆ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಅದ್ಯಾವುದೋ ನಟ ಅರೆಸ್ಟ್ ಆದ್ರೆ ಅದಕ್ಕೂ ನಾನೇ ಕಾರಣ ಅಂತಾರೆ. ಏನೇನೋ ನನ್ನ ಮೇಲೆ ಇಲ್ಲಸಲ್ಲದ ವಿಚಾರ ಹರಿಬಿಡ್ತಾರೆ. ನನ್ನ ಮೇಲೆ ಯಾವುದೋ ಚಾನಲ್‍ನವನು ಏನೇನೋ ಮಾತಾಡ್ತಾನೆ. ಆ ರೀತಿ ಈ ಅಣ್ಣತಮ್ಮನ ಬಗ್ಗೆ ಮಾತನಾಡಿದ್ರೆ ಇಷ್ಟೊತ್ತಿಗೆ ಆ ಸ್ಟುಡಿಯೋಗೆ ಬೆಂಕಿ ಹಾಕ್ತಿದ್ರು ಎಂದು ಅವರು ಹೇಳಿದರು.
ನನ್ನನ್ನು ಮುಗಿಸಲು ಏನೇನೋ ಮಾಡ್ತಿದ್ದಾರೆ. ಅಣ್ಣತಮ್ಮ ಸೇರಿ ನಮ್ಮ ಪಕ್ಷ ಮುಗಿಸಿಬಿಟ್ಟೆವು ಎಂದು ಏನೇನೋ ಲೆಕ್ಕಾಚಾರ ಇಟ್ಕೊಂಡಿದ್ದರು. ಪಾಪ ನಿದ್ದೆಯನ್ನೂ ಮಾಡ್ತಿಲ್ಲ. ದೇವೇಗೌಡರ ಕುಟುಂಬ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜನರ ಆಶೀರ್ವಾದ ಇರುವವರೆಗೂ ನಮ್ಮನ್ನ ಯಾರೂ ಏನೂ ಮಾಡಲು ಆಗಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೇವಣ್ಣ ಕುಟುಂಬಕ್ಕೆ ಕಾನೂನು ಸಂಕಷ್ಟ – ಯಾರ ವಿರುದ್ಧ ಏನೇನು ಪ್ರಕರಣ?