ಬೀಟ್ರೂಟ್ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಮಕ್ಕಳಿಗೆ ಮುಖ್ಯವಾಗಿ ಬೀಟ್ರೂಟ್ ಹೆಚ್ಚು ಹೆಚ್ಚು ತಿನ್ನಿಸಲು ಪೋಷಕರು ಸಾಹಸ ಪಡುತ್ತಲೇ ಇರುತ್ತಾರೆ. ಅದೇ ಬೀಟ್ರೂಟ್ ಅನ್ನು ನೀವು ಪಲ್ಯ ಅಥವಾ ಸಲಾಡ್ ರೂಪದಲ್ಲಿ ಮಕ್ಕಳಿಗೆ ನೀಡುವುದಕ್ಕಿಂತ ಈ ರೀತಿಯಾಗಿ ಟೇಸ್ಟಿ ವಿಧಾನದಲ್ಲಿ ಕೊಟ್ಟರೆ ಅವರೂ ಖುಷಿ ಪಟ್ಟು ಸವಿಯುತ್ತಾರೆ. ನಾವಿಂದು ಹೇಳಿಕೊಡುತ್ತಿರುವ ಬೀಟ್ರೂಟ್ ಕಟ್ಲೆಟ್ ರೆಸಿಪಿಯನ್ನು ಸುಲಭವಾಗಿ ಮಾಡಬಹುದು. ಬೀಟ್ರೂಟ್‌ನಿಂದ ಕಟ್ಲೆಟ್ ಹೇಗೆ ಮಾಡೋದೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಬೀಟ್ರೂಟ್ – 250 ಗ್ರಾಂ (ಮಧ್ಯಮ ಗಾತ್ರದ್ದು 2)
ಆಲೂಗಡ್ಡೆ – 250 ಗ್ರಾಂ
ಅರಿಶಿನ – ಕಾಲು ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಚಾಟ್ ಮಸಾಲಾ – 1 ಟೀಸ್ಪೂನ್
ಆಮ್‌ಚೂರ್ ಪುಡಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
ಉಪ್ಪು – ರುಚಿಗೆ ತಕ್ಕಷ್ಟು
ಶುಂಠಿ ಪೇಸ್ಟ್ – 1 ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ರವೆ – ಅರ್ಧ ಕಪ್
ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಪಿಜ್ಜಾ ಸ್ಯಾಂಡ್‌ವಿಚ್ ಅಂದ್ರೆ ಇಷ್ಟ, ಆದ್ರೆ ಮಾಡಲು ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕುಕ್ಕರ್‌ಗೆ ಸಾಕಷ್ಟು ನೀರು ಹಾಕಿ ಬೀಟ್ರೂಟ್ ಹಾಗೂ ಆಲೂಗಡ್ಡೆಯನ್ನು ಸ್ವಲ್ಪ ಉಪ್ಪಿನೊಂದಿಗೆ 7-8 ಸೀಟಿ ಬರುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
* ಕುಕ್ಕರ್ ಸ್ವಲ್ಪ ತಣ್ಣಗಾದ ಬಳಿಕ ಮುಚ್ಚಳ ತೆಗೆದು ನೀರನ್ನು ಹರಿಸಿ, ಬೀಟ್ರೂಟ್ ಹಾಗೂ ಆಲೂಗಡ್ಡೆಯ ಸಿಪ್ಪೆ ಸುಲಿದು, ಒಂದು ಬಟ್ಟಲಿನಲ್ಲಿ ಹಿಸುಕಿ ಇಡಿ.
* ಹಿಸುಕಿದ ತರಕಾರಿಗಳಿಗೆ ಅರಿಶಿನ, ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಕೊತ್ತಂಬರಿ ಪುಡಿ, ಚಾಟ್ ಮಸಾಲಾ, ಆಮ್‌ಚೂರ್ ಪುಡಿ, ಹಸಿರು ಮೆಣಸಿನಕಾಯಿ, ಉಪ್ಪು ಹಾಗೂ ಕಾರ್ನ್ ಫ್ಲೋರ್ ಹಾಕಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ.
* ಈಗ ನಿಮ್ಮ ಕೈಗಳಿಂದ ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ತೆಗೆದುಕೊಂಡು ದುಂಡಗಿನ ಪ್ಯಾಟೀ ಅಥವಾ ಕಟ್ಲೆಟ್ ರೂಪಕ್ಕೆ ತನ್ನಿ.
* ಒಂದು ತಟ್ಟೆಯಲ್ಲಿ ಹುರಿದ ರವೆಯನ್ನು ತೆಗೆದುಕೊಳ್ಳಿ. ಪ್ರತಿ ಪ್ಯಾಟೀಗಳನ್ನು ಅದರ ಮೇಲೆ ಇರಿಸಿ, ಎಲ್ಲ ಬದಿಗಳೂ ಸಮವಾಗಿ ಲೇಪಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಈಗ ಪ್ಯಾನ್ ತೆಗೆದುಕೊಂಡು, ಅದರಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಕಟ್ಲೆಟ್‌ಗಳನ್ನು ಗರಿಗರಿ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಬಳಿಕ ಕಟ್ಲೆಟ್‌ಗಳನ್ನು ಪ್ಯಾನ್‌ನಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಬೀಟ್ರೂಟ್ ಕಟ್ಲೆಟ್ ತಯಾರಾಗಿದ್ದು, ನಿಮ್ಮಿಷ್ಟದ ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಲು ಮಕ್ಕಳಿಗೆ ನೀಡಿ. ಇದನ್ನೂ ಓದಿ: ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್