– ವಕ್ಫ್ ಪ್ರತಿಭಟನೆಯಲ್ಲಿ ಮಾತನಾಡಿದ್ದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಗುಲ್ಬರ್ಗಾ: ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ ಎಂದು ವಕ್ಫ್ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ (Marularadhya Swamiji) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಮನೆಗಳಿಗೆ ‘ಗ್ರೇ ವಾಟರ್ ರೀಸೈಕ್ಲಿಂಗ್’ ಕಡ್ಡಾಯಕ್ಕೆ ಜಲಮಂಡಳಿ ಚಿಂತನೆ – ಏನಿದು ಯೋಜನೆ?
ರಾಜ್ಯಾದ್ಯಂತ ವಕ್ಫ್ ನೋಟಿಸ್ (Waqf Notice) ವಿವಾದ ಬುಗಿಲೆದ್ದಿತ್ತು. ಪರಿಣಾಮ ಜಿಲ್ಲೆಯಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಎಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಪೊಲೀಸರ ಮುಂದೆಯೇ, ‘ಜೀವ ಕೊಡುವುದಕ್ಕೂ, ಜೀವ ತೆಗೆಯುವುದಕ್ಕೂ ಸಿದ್ಧರಿದ್ದೀವಿ ಹುಷಾರ್.. ಯುವಕರ ಮನೆಯಲ್ಲಿ ತಲ್ವಾರ್ ಇವೆ. ಎಲ್ಲರ ಮನೆಯಲ್ಲಿ ಎಲ್ಲ ಇದೆ. ಯಾರ್ ಬರುತ್ತಾರೆ ಅವರನ್ನು ತಲ್ವಾರ್‌ನಿಂದ ಕಡಿಯುತ್ತೇವೆ. ಇನ್ಮುಂದೆ ನಾವು ಮಕ್ಕಳ ಕೈಯಲ್ಲಿ ಪೆನ್ನು ಕೊಡುವುದರ ಬದಲು ತಲ್ವಾರ್ ಕೊಡೋಣ’ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದರು.
ಸ್ವಾಮೀಜಿಯ ಹೇಳಿಕೆಯ ಆಧಾರದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಕಾಯಿದೆ 299, 353/2 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವಿಟ್ಟುಕೊಂಡಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: ಬೆಂಗಳೂರಿಗರಿಗೆ ನೇಪಾಳಿ ಕಳ್ಳರ ಕಂಟಕ – ಮನೆಗೆಲಸ, ಸೆಕ್ಯೂರಿಟಿ ರೂಪದಲ್ಲಿ ಎಂಟ್ರಿ