ಬೆಂಗಳೂರು: ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ರೈತರಿಗೆ ಉಚಿತವಾಗಿ ದೇಶಿ ತಳಿ ಕುರಿಗಳನ್ನ ಸರ್ಕಾರ ನೀಡಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದರು.ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ
Advertisement
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವಾರು ದೇಶಿಯ ಕುರಿ ತಳಿಗಳು ವಿನಾಶದ ಅಂಚಿನಲ್ಲಿವೆ. ದೇಶಿ ಕುರಿ ತಳಿಗಳ ಸಂರಕ್ಷಣೆಗೆ ಸಾಕಷ್ಟು ಮೂಲಭೂತ ಸೌಕರ್ಯಗಳು ಮತ್ತು ಕುರಿಗಾಹಿಗಳಿಗೆ ಸಹಾಯ ಧನದ ಅವಶ್ಯಕತೆ ಇದೆ. ಇದಕ್ಕಾಗಿ 5 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು. ಅಲ್ಲದೆ ಉಚಿತವಾಗಿ ರೈತರಿಗೆ ದೇಶಿ ತಳಿ ಕೊಡಬೇಕು ಎಂದು ಒತ್ತಾಯಿಸಿದರು.
Advertisement
ಇದಕ್ಕೆ ಸಚಿವ ವೆಂಕಟೇಶ ಉತ್ತರ ನೀಡಿ, 2019ರ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ 110.51 ಲಕ್ಷ ಕುರಿಗಳು ಹಾಗೂ 61.69 ಲಕ್ಷ ಮೇಕೆಗಳು ಇವೆ. ಮಂಡ್ಯ, ಹಾಸನ, ಕೆಂಗುರಿ, ಬಳ್ಳಾರಿಯಲ್ಲಿ ಡೆಕನಿ, ಯಳಗ ಕುರಿ ತಳಿಗಳು ಮತ್ತು ನಂದಿದುರ್ಗ, ಬಿದರಿ ಮೇಕೆ ತಳಿಗಳು ಇವೆ. ರಾಜ್ಯದಲ್ಲಿ ವಿನಾಶದ ಅಂಚಿನಲ್ಲಿ ಇರುವ ದೇಶಿಯ ಕುರಿ ತಳಿ ಸಂರಕ್ಷಣೆಗಾಗಿ 5 ಕಡೆ ಕುರಿ/ಮೇಕೆ ತಳಿ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ರೈತರಿಗೆ ರಿಯಾಯಿತಿ ದರದಲ್ಲಿ ಮೇಕೆ, ಕುರಿ ತಳಿಗಳನ್ನು ಕೊಡಲಾಗುತ್ತಿದೆ. ವಿಶೇಷ ಅನುದಾನ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.ಇದನ್ನೂ ಓದಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಮನೆಗೆ ಬೆಂಕಿ – ಮಾಜಿ ಡಿಎಸ್‌ಪಿ ಸೇರಿ 6 ಮಂದಿ ಸಾವು