ಭಾರತೀಯ ಸಿನಿಮಾ ರಂಗದ ದಂತಕಥೆ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರೋದ್ಯಮದ ಅನೇಕರು ಹಂಸಲೇಖ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಹಂಸಲೇಖ ಗರಡಿಯಲ್ಲಿ ಪಳಗಿರುವ ಕನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ (Shashank) ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.
Advertisement
ಹಂಸಲೇಖ ಅವರಿಗೆ ಈಗಾಗಲೇ ಭಾರತೀಯ ನಾಗರೀಕ ಅತ್ಯುನ್ನತ ಪ್ರಶಸ್ತಿಗಳು ಸಿಗಬೇಕಿತ್ತು. ಅವರ ಸಾಧನೆ ಏನೂ ಕಡಿಮೆ ಇಲ್ಲ. ಸಂಗೀತ ನಿರ್ದೇಶಕರಾಗಿ (Music Director), ಚಿತ್ರ ಸಾಹಿತಿಯಾಗಿ, ರಂಗಭೂಮಿ ಹಾಗೂ ಜನಪದ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಸಿನಿಮಾ ಸಂಗೀತದ ಗತಿಯನ್ನೇ ಬದಲಿಸಿದ ಮಹಾನ್ ಸಂಗೀತ ನಿರ್ದೇಶಕ. ಸಾವಿರಾರು ಗಾಯಕರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದ ಪಂಡಿತ. ಆದರೂ, ಈವರೆಗೂ ಅವರಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ದೊರೆತಿಲ್ಲ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ
Advertisement
Advertisement
ಬಾಲಿವುಡ್ ಮತ್ತು ಇತರ ಚಿತ್ರೋದ್ಯಮಕ್ಕೆ ಹೋಲಿಸಿದರೆ ನಾಗರೀಕ ಪ್ರಶಸ್ತಿಗಳು ಇತರ ಚಿತ್ರೋದ್ಯಮಕ್ಕೆ ಸಂದಿದ್ದು ಕಡಿಮೆ. ಹಂಸಲೇಖ ಅವರು ಮಾಡಿದ ಕೆಲಸಕ್ಕೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಕೂಡ ಸಿಗಬೇಕಿತ್ತು. ಸಿಕ್ಕಿಲ್ಲ ಎನ್ನುವುದು ಕನ್ನಡಿಗರ ನೋವು. ಆ ನೋವನ್ನು ಶಶಾಂಕ್ ಇಂದು ಹಂಚಿಕೊಂಡಿದ್ದಾರೆ.
Advertisement
ಹಂಸಲೇಖ ಅವರು ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎನ್ನುವುದು ಎಲ್ಲರ ಒತ್ತಾಸೆ. ಅದನ್ನು ಶಶಾಂಕ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿಗೆ ಇರುವವರು ಶೇರ್ ಮಾಡಿ ಎಂದು ಕೇಳಿದ್ದಾರೆ. ಹೌದು, ಹಂಸಲೇಖ ಅವರು ಎಲ್ಲ ರೀತಿಯಿಂದಲೂ ಪ್ರಶಸ್ತಿಗೆ ಅರ್ಹರು. ಅವರಿಗೆ ಪದ್ಮಶ್ರೀ ಈ ಬಾರಿ ಸಿಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.