– ಬಿಜೆಪಿ ಕಚೇರಿ ಗುಡಿಸೋಕು ಸೈ
– ಪಕ್ಷ ಸಂಘಟನೆಗೂ ಸಿದ್ಧ
ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಗೆ ಕಸರತ್ತು ಹೊಸ ಹೊಸ ತಿರುವಿಗೆ ಕಾರಣ ಆಗ್ತಿದೆ. ಗೆದ್ದವರ ಪೈಕಿ 10 ಜನರಿಗೆ ಮಾತ್ರ ಮಂತ್ರಿ ಸ್ಥಾನ ಫಿಕ್ಸ್ ಅಂತ ಸಿಎಂ ಹೇಳಿದ ಕೂಡಲೇ ನೂತನ ಶಾಸಕರು ಹೊಸ ವರಸೆ ಆರಂಭ ಮಾಡಿದ್ದಾರೆ. ಶಾಸಕ ಮಹೇಶ್ ಕುಮಟಳ್ಳಿ ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ. ಆದರೆ ಸೋತ ವಿಶ್ವನಾಥ್ ಗೆ ಮಂತ್ರಿ ಸ್ಥಾನ ಕೊಡಿ ಅಂತ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ.
Advertisement
ಬೆಂಗಳೂರಿನಲ್ಲಿ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಟಳ್ಳಿ, ಸಿಎಂ ಯಡಿಯೂರಪ್ಪ ಚುನಾವಣೆ ವೇಳೆ 35 ಸಾವಿರ ಜನರ ಮುಂದೆ ನನ್ನನ್ನು ಶ್ರೀಮಂತ ಪಾಟೀಲ್ ರನ್ನ ಮಂತ್ರಿ ಮಾಡ್ತೀನಿ ಅಂತ ಮಾತು ಕೊಟ್ಟಿದ್ರು. ಯಡಿಯೂರಪ್ಪ ಮಾತು ತಪ್ಪೋದಿಲ್ಲ ಅಂತ ವಿಶ್ವಾಸ ಇದೆ ಅಂತ ತಿಳಿಸಿದರು. ಇತ್ತ ಇತ್ತೀಚಿನ ಬೆಳವಣಿಗೆ ನನಗೆ ಕನ್ಫ್ಯೂಸ್ ಮಾಡಿದೆ. ಚುನಾವಣೆ ವೇಳೆ ಗೆದ್ದವರಿಗೆ ಸಚಿವ ಸ್ಥಾನ ಕೊಡ್ತೀನಿ ಅಂದಿದ್ದರು. ಬಿಜೆಪಿ ನಾಯಕರು ನಿಮ್ಮನ್ನ ಕೈ ಬಿಡಲ್ಲ ಅಂದಿದ್ದರು. ಈಗ ನೋಡಿದ್ರೆ ಹೆಸರು ಕೈ ಬಿಡ್ತಾರೆ ಅಂತ ಚರ್ಚೆ ಆಗ್ತಿರೋದು ಮನಸ್ಸಿಗೆ ನೋವಾಗಿದೆ ಅಂತ ಅಸಮಾಧಾನ ಹೊರ ಹಾಕಿದ್ರು.
Advertisement
ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಮೀರೋದಿಲ್ಲ. ಇನ್ನೂ ಸಿಎಂ ಬಳಿ ನಾವು ಮಾತಾಡಿಲ್ಲ. ನಾನು ಸಿಎಂ ಬಳಿ ಮಾತಾಡ್ತೀವಿ ಅಂದ್ರು. ನಾವು ನೂರಾರು ಸಮಸ್ಯೆ ಎದುರಿಸಿದವರು. ಹುಲಿ ಬಾಯಿಗೆ ತಲೆ ಕೊಟ್ಟು ಬಂದವರು. ನಮ್ಮ ತ್ಯಾಗದಿಂದ ಈ ಸರ್ಕಾರ ಬಂದಿದೆ. ಎಲ್ಲವನ್ನೂ ಸಹಿಸಿಕೊಂಡು, ನೋವು ಪಡೆದುಕೊಂಡು ನಾವು ಶಾಸಕರಾದೆವು. ಈಗ ಇಂತಹ ಚರ್ಚೆ ಗೊಂದಲ ಮೂಡಿಸಿದೆ ಅಂತ ತಿಳಿಸಿದರು. ಇದನ್ನೂ ಓದಿ: ಕುಮಟಳ್ಳಿ ಪರ ಬ್ಯಾಟ್ ಬೀಸಿದ ಡಿಸಿಎಂ ಸವದಿ
Advertisement
Advertisement
ನಾನು ಮಂತ್ರಿ ಆಗಬೇಕು ಅನ್ನೋ ಆಸೆ ಇಲ್ಲ. ಆದರೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲದೆ ಹೋದರೆ ಜನರ ದೃಷ್ಟಿಯಲ್ಲಿ ಕೆಟ್ಟ ಸಂದೇಶ ಹೋಗುತ್ತೆ ಅಂತ ತಿಳಿಸಿದ್ರು. ಒಂದು ವೇಳೆ ನಾನು ತ್ಯಾಗ ಮಾಡಬೇಕು ಅಂದ್ರೆ ಮಾಡಲು ಸಿದ್ಧ. ಆದರೆ ಸೋತ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಷರತ್ತು ಹಾಕಿದರು.
ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಮಾಡಿದ್ರು. ವಿಶ್ವನಾಥ್ ರನ್ನ ಯಾಕೆ ಮಾಡಬಾರದು ಅಂತ ಸವದಿ ಹೆಸರು ಮುಂದಿಟ್ಟು ಪ್ರಶ್ನೆ ಮಾಡಿದ್ರು. ಉಪ ಚುನಾವಣೆ ರಾಜಕೀಯ ಸನ್ನಿವೇಶದಿಂದ ಆಗಿದೆ. ಹೀಗಾಗಿ ಇಬ್ಬರು ಸೋತರು ಅಂತ ಮಾತಾಡೋದು ಬೇಡ. ನಾನು ಬಿಜೆಪಿ ಕಚೇರಿಯಲ್ಲಿ ಕಸಬೇಕಾದರು ಗುಡಿಸೋಕೆ ಸಿದ್ಧ. ಪಕ್ಷ ಸಂಘಟನೆ ಮಾಡೋಕು ಸಿದ್ಧ. ಆದರೆ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಮಹೇಶ್ ಕುಮಟಳ್ಳಿ ಒತ್ತಾಯಿಸಿದರು.