ಚಿಕ್ಕೋಡಿ: ಒಂದು ಬಾರಿ ಜೆಡಿಎಸ್‌ಗೆ (JDS) ಬಹುಮತ ನೀಡಿ, ಈ ರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡುವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಶಪಥ ಮಾಡಿದರು.
ಬೆಳಗಾವಿ (Belagavi) ಜಿಲ್ಲೆಯ ಕುಡಚಿ ವಿಧಾನಸಭಾ ಕ್ಷೇತ್ರದ ಕುರುಬಗೋಡಿ ಗ್ರಾಮದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಕರ್ನಾಟಕ ಸುರಕ್ಷಿತವಾಗಿಡಲು ಮೋದಿ, ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ – ಅಮಿತ್ ಶಾ
Advertisement
Advertisement
ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ 1 ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡುತ್ತೇವೆ. ಯಾವುದೇ ಖಾಸಗಿ ಶಾಲೆಗಳಿಗೂ (Private School) ಕಡಿಮೆಯಿಲ್ಲದಂತೆ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡ್ತೇವೆ. ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾದ್ರೆ, ಸರ್ಕಾರದಿಂದಲೇ ಆಸ್ಪತ್ರೆ (Hospital) ಬಿಲ್ ಪಾವತಿಸುವ ಕೆಲಸ ಮಾಡ್ತೇವೆ ಎಂದು ಭರವಸೆ ನೀಡಿದರು.
Advertisement
Advertisement
ಪ್ರತಿ ಗ್ರಾಮ ಪಂಚಾಯಿತಿಗೆ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿ ಮೂವರು ತಜ್ಞ ವೈದ್ಯರು ಸೇರಿದಂತೆ 30 ಜನ ವೈದ್ಯಕೀಯ ಸಿಬ್ಬಂದಿ ನೇಮಿಸಿ, ಗ್ರಾಮೀಣ ಜನತೆಯ ಆರೋಗ್ಯಕ್ಕೆ ಒತ್ತು ನೀಡುತ್ತೇವೆ. ಪ್ರತಿನಿತ್ಯ ನನ್ನ ಬಳಿ ನೂರಾರು ಜನ ಬರ್ತಾರೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅವರಿಗೆ ಹಣಕಾಸಿನ ನೆರವು ಸಿಗುವಂತೆ ಮಾಡ್ತೇವೆ. ನಾನು ಬಡ ಜನರಿಗೆ ಬಹಳ ಸುಲಭವಾಗಿ ಸಿಗುವ ವ್ಯಕ್ತಿ. ಆದ್ದರಿಂದ ಜನ ಬೇರೆ ಯಾರ ಮನೆಗೂ ಹೋಗುವುದಿಲ್ಲ. ನನ್ನ ಮನೆಗೇ ಬರ್ತಾರೆ ಎಂದು ಹೇಳಿಕೊಂಡರು.
ವೇದಿಕೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪಗೌಡ ಪಾಟೀಲ್ ಮೊದಲಾದವರು ಇದ್ದರು. ಇದನ್ನೂ ಓದಿ: ಟರ್ಕಿ ಭೀಕರ ಭೂಕಂಪದಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ಕಂಪನಿಯ ಟೆಕ್ಕಿ ಸಾವು – ಅವಶೇಷಗಳಡಿ ಮೃತದೇಹ ಪತ್ತೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k