ಇಂಫಾಲ್: ಮಣಿಪುರದಲ್ಲಿ ಶಾಂತಿ ಸ್ಥಾಪಿಸಬೇಕಾದರೆ, ಬಿಜೆಪಿ ಸರ್ಕಾರಕ್ಕೆ ಇನ್ನೂ 5 ವರ್ಷ ಅವಕಾಶ ಕೊಡಿ ಎಂದು ಮತದಾರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಣಿಪುರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನಮಗೆ ಇನ್ನೂ 5 ವರ್ಷ ಅವಕಾಶ ಕೊಡಿ. ರಾಜ್ಯದಲ್ಲಿ ಶಾಂತಿ ನೆಲೆಸಲು ಬಿಜೆಪಿ ಸರ್ಕಾರ ಮಣಿಪುರದ ಬಂಡಾಯ ಗುಂಪುಗಳೊಂದಿಗೆ ಮಾತುಕತೆಗೆ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಆದೇಶ ನಿರಾಕರಿಸಿ ಉಕ್ರೇನ್‍ನಿಂದ ಹಿಂದಿರುಗಿದ್ರೆ ಪ್ರತೀ ಸೈನಿಕರೊಂದಿಗೆ ಸೆಕ್ಸ್‌ಗೆ ಸಿದ್ಧಳಿದ್ದೇನೆ: ಮಾಡೆಲ್
Advertisement
Advertisement
ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವು ಶಾಂತಿ ಸ್ಥಾಪನೆಗೆ ಇದೇ ರೀತಿಯ ಉಪಕ್ರಮಗಳನ್ನು ಕೈಗೊಂಡಿದೆ. ಈಶಾನ್ಯದಲ್ಲಿ 9,500 ಕ್ಕೂ ಹೆಚ್ಚು ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೆ ಎಂದು ಅಮಿತ್ ಶಾ ವಿವರಿಸಿದ್ದಾರೆ.
Advertisement
ಈಗ ಮಣಿಪುರ ರಾಜ್ಯದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವು ಮುಂದಿನ ಕೆಲವು ವರ್ಷಗಳಲ್ಲಿ 825 ಕೋಟಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನ ದಾನ ಮಾಡಿದ ಭಕ್ತ
Advertisement
15 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಒಟ್ಟು ಮನೆಗಳ ಶೇ.5 ರಷ್ಟು ಜನರು ಮಾತ್ರ ಪೈಪ್‌ಲೈನ್‌ನಲ್ಲಿ ನೀರಿನ ಸೌಲಭ್ಯ ಪಡೆದಿದ್ದರು. ಆದರೆ 2017ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಮಾಣ ಶೇ.57ಕ್ಕೆ ತಲುಪಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.