ಕಿತ್ತುಕೊಂಡ ನೆಟ್ಟಾರು ಪತ್ನಿಯ ಉದ್ಯೋಗವನ್ನು ಮರಳಿ ನೀಡಿ: ಸಿದ್ದರಾಮಯ್ಯಗೆ ಕಟೀಲ್ ಮನವಿ

Public TV
2 Min Read
Nalin Kumar Kateel

ಮಂಗಳೂರು: ಪ್ರವೀಣ್ ನೆಟ್ಟಾರು (Praveen Nettaru) ಅವರ ಪತ್ನಿ ನೂತನ ಕುಮಾರಿ (Nutana Kumari) ಅವರಿಗೆ ಅನುಕಂಪದ ಆಧಾರದಲ್ಲಿ ಬೊಮ್ಮಾಯಿ ಸರ್ಕಾರ ಉದ್ಯೋಗ ನೀಡಿತ್ತು. ಆದರೆ ಕಾಂಗ್ರೆಸ್ (Congress) ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಲೇ ಅವರ ಸರ್ಕಾರಿ ಉದ್ಯೋಗವನ್ನು ಕಿತ್ತುಕೊಂಡಿದೆ. ನೆಟ್ಟಾರು ಪತ್ನಿ ಅವರ ಉದ್ಯೋಗವನ್ನು ಮರಳಿ ನೀಡುವಂತೆ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಸಿಎಂ ಸಿದ್ದರಾಮಯ್ಯ (Siddaramaiah) ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Praveen Kumar Nettar wife nutana

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಟೀಲ್, ಪೂರ್ಣ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಗ್ಯಾರಂಟಿಗಳ ಬಗ್ಗೆ ಹಾಗೂ ಜನರ ಸಮಸ್ಯೆ ಪರಿಹಾರ ಮಾಡೋ ಬದಲು ಅಧಿಕಾರ ಹಂಚಿಕೆಯ ಚರ್ಚೆಯಲ್ಲೇ ಇದೆ. ಕಾಂಗ್ರೆಸ್‌ನ 5 ಉಚಿತ ಯೋಜನೆಗಳನ್ನು ಸರ್ಕಾರ ಬಂದು 20 ದಿನ ಕಳೆದರೂ ಇನ್ನೂ ಹಂಚಿಕೆ ಮಾಡಿಲ್ಲ. ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಹೋದವರಿಗೆ ಏಟು ಬೀಳುತ್ತಿದೆ. ಕಾಂಗ್ರೆಸ್ ವಿಜಯೋತ್ಸವದಲ್ಲೇ ಗಲಭೆ ಮಾಡಿ, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಏನೂ ಮಾಡದೆ ಬಿಟ್ಟಿದೆ ಎಂದು ಆರೋಪಿಸಿದರು.

siddu kateel

 

ನಮ್ಮ ಬಿಜೆಪಿ ಶಾಸಕ ಹರೀಶ್ ಪೂಂಜಾ ಸೇರಿದಂತೆ ನಾಯಕರ ಮೇಲೆ ವಿನಾ ಕಾರಣ ಎಫ್‌ಐಆರ್ ದಾಖಲು ಮಾಡುತ್ತಿದ್ದಾರೆ. ಕಾಂಗ್ರೆಸ್ ದ್ವೇಷ ಸಾಧನೆಯ ಮೂಲಕ ಬಿಜೆಪಿಯನ್ನು ಕಟ್ಟಿ ಹಾಕುತ್ತಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಗೆ ಬಿಜೆಪಿ ಸರ್ಕಾರ ಅನುಕಂಪದ ಆಧಾರದ ಮೇಲೆ ನೀಡಿದ ಉದ್ಯೋಗವನ್ನು ಕಿತ್ತುಕೊಂಡಿದೆ. ಹೀಗಾಗಿ ಮತ್ತೆ ಉದ್ಯೋಗ ನೀಡಬೇಕೆಂದು ಸಿದ್ದರಾಮಯ್ಯಗೆ ಕಟೀಲ್ ಒತ್ತಾಯಿಸಿದರು. ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು : ಬಿವೈ ರಾಘವೇಂದ್ರ

ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ದ್ವೇಷದ ರಾಜಕಾರಣವನ್ನು ವಿರೋಧಿಸಿ ಪ್ರತಿಭಟಿಸುತ್ತೇವೆ. ತಿಂಗಳ ಒಳಗೆ ಎಲ್ಲವೂ ಸರಿಯಾಗದಿದ್ದರೆ ಹೋರಾಡುತ್ತೇವೆ. ಬಿಜೆಪಿ ಸರ್ಕಾರದ ಮೇಲೆ ಮಾಡಿದ ಆರೋಪಗಳ ಸಂಪೂರ್ಣ ತನಿಖೆ ನಡೆಯಲಿ. ಸಿದ್ದರಾಮಯ್ಯ ಮೇಲಿರುವ ಲೋಕಾಯುಕ್ತ ಕೇಸ್ ಅನ್ನೂ ತನಿಖೆ ಮಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನಕ್ಕೆ ತಂದರೆ ಬಿಜೆಪಿಯ ಅಸ್ತಿತ್ವವೇ ಕಳೆದುಹೋಗುತ್ತದೆ: ಈಶ್ವರ ಖಂಡ್ರೆ

Share This Article