– ಸಿಎಂಗೆ ಪತ್ರ ಬರೆದ ಕಾಂಗ್ರೆಸ್ ಮುಖಂಡ
ಬೆಂಗಳೂರು: ರಂಜಾನ್ (Ramzan) ವೇಳೆ ನೌಕರರಿಗೆ 1 ಗಂಟೆ ರಿಲೀಫ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಹುಸೇನ್ (A Hussain) ಮನವಿ ಮಾಡಿದ್ದಾರೆ.
Advertisement
ರಂಜಾನ್ ತಿಂಗಳಲ್ಲಿ ಉಪವಾಸ ಬಿಡೋಕೆ 1 ಗಂಟೆ ಮುಂಚಿತವಾಗಿ ಮುಸ್ಲಿಂ ಸಮುದಾಯದ ಸರ್ಕಾರಿ ನೌಕರರಿಗೆ ಮನೆಗೆ ತೆರಳಲು ಅವಕಾಶ ನೀಡಿ ಎಂದು ಕೋರಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್‌ಗೆ ಪತ್ರ ಬರೆದಿದ್ದಾರೆ. ಕೊಡಲೇಬೇಕು ಎಂಬ ಒತ್ತಾಯ, ಒತ್ತಡ ಇಲ್ಲ. ಆದರೆ ತೆಲಂಗಾಣ ಸರ್ಕಾರದವರು ಅವರಾಗಿಯೇ ಕೊಟ್ಟಿರೋದಕ್ಕೆ ನಾವು ಇಲ್ಲಿ ಕೇಳುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ಜೇವರ್ಗಿ ಮೂಲದ ಟೆಕ್ಕಿ ಸಾವು
Advertisement
Advertisement
ನಮಗೆ ಸರ್ಕಾರ ಅವಕಾಶ ಮಾಡಿಕೊಡಲೇಬೇಕು ಅಂತ ಹೇಳ್ತಿಲ್ಲ. ಸರ್ಕಾರ ಅವಕಾಶ ಮಾಡಿಕೊಟ್ಟರೆ ಸಂತೋಷ. ನಾನು ನಮ್ಮ ಸಮುದಾಯದ ಯಾವುದೇ ನಾಯಕರ ಜೊತೆ ಚರ್ಚೆ ಮಾಡಿಲ್ಲ ಎಂದು ಸಿಎಂಗೆ ಪತ್ರ ಬರೆದಿದ್ದೇವೆ. ಸಿಎಂ ಅವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ಅವರಿಗೆ ಪತ್ರ ಬರೆದಿದ್ದೇವೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ ಹಿಂದಿಕ್ಕಿದ ರೋಹಿತ್ ಶರ್ಮಾ – 11,000 ರನ್ ಪೂರೈಸಿ ದಾಖಲೆ
Advertisement
ದಸರಾಗೆ 10-15 ದಿನ ರಜೆ ಕೊಡ್ತಾರೆ. ಶಿವರಾತ್ರಿಗೆ ರಜೆ ಕೊಡ್ತಾರೆ. ಅದಕ್ಕೆ ನಾವೇನು ತಗಾದೆ ತೆಗೆದಿಲ್ವಲ್ಲ. ಅಕಸ್ಮಾತ್ ಸರ್ಕಾರ ಒಂದು ಗಂಟೆ ಮುಂಚಿತವಾಗಿ ತೆರಳಲು ಅವಕಾಶ ಮಾಡಿಕೊಡದಿದ್ದರೆ ನಮಗೇನು ಬೇಸರ ಇಲ್ಲ ಎಂದರು. ಇದನ್ನೂ ಓದಿ: ಗಿಲ್ ಶತಕದಾಟ, ಶಮಿ ಬೆಂಕಿ ಬೌಲಿಂಗ್ – ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ