ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ನ ಚಿತ್ರದ ಮುಹೂರ್ತ ಇಂದು ಬೆಂಗಳೂರಿನ ರಾಕ್ ಲೈನ್ ವೆಂಕಟೇಶ್ ಸ್ಟುಡಿಯೋದಲ್ಲಿರುವ ದೇವಸ್ಥಾನದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಚಾಲನೆ ನೀಡಿದರು. ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
Advertisement
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ಹೊಸ ಬಗೆಯ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರಂತೆ ನಿರ್ದೇಶಕರು. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಸದ್ಯಕ್ಕೆ ಪ್ರೊಡಕ್ಷನ್ ನಂ 27 ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಗ್ರೀನ್ ಇಂಡಿಯಾ ಅಭಿಯಾನಕ್ಕೆ ಸಲ್ಮಾನ್ ಖಾನ್ ಸಾಥ್: ಗಿಡ ನೆಡುವಂತೆ ಫ್ಯಾನ್ಸ್ಗೆ ಸಲ್ಲು ಮನವಿ
Advertisement
Advertisement
ಮಹೂರ್ತ ಸಮಾರಂಭಕ್ಕೆ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು. ರಾಕ್ ಲೈನ್ ಸ್ಟುಡಿಯೋದಲ್ಲಿರುವ ದೇವಸ್ಥಾನದಲ್ಲೇ ಸಿನಿಮಾದ ಮುಹೂರ್ತ ನಡೆಯಿತು. ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆ ಪ್ರಭುದೇವ ನಡೆಸುತ್ತಿದ್ದರೂ, ಇಂದು ಅವರು ಮುಹೂರ್ತಕ್ಕೆ ಹಾಜರಾಗಿರಲಿಲ್ಲ. ಬೇರೊಂದು ಕಾರ್ಯದಲ್ಲಿ ಅವರು ಬ್ಯುಸಿ ಆಗಿರುವುದರಿಂದ ವಿಡಿಯೋ ಸಂದೇಶವೊಂದನ್ನು ಅವರು ಕಳುಹಿಸಿದ್ದರು.
Advertisement
ಸಿನಿಮಾ ಮಹೂರ್ತಕ್ಕೆ ಹಾಜರಾಗಲು ಆಗುತ್ತಿಲ್ಲ. ಹಾಗಾಗಿ ಕ್ಷಮೆ ಕೇಳುತ್ತೇನೆ. ನಾನೇನಾದರೂ ತಪ್ಪು ಮಾಡಿದರೆ ಎಕ್ಸ್ ಕ್ಯೂಸ್ ಮಾಡಿಕೊಳ್ಳಿ. ನಾನು ಪ್ರಬುದ್ಧ ನಟನಲ್ಲ. ನಾನು ಅಷ್ಟು ಮೆಚ್ಯುರ್ ಆಗಿರೋನಲ್ಲ ಎಂದು ಪ್ರಭುದೇವ್ ವಿಡಿಯೋದಲ್ಲಿ ಹೇಳಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆ ಆಗಿತ್ತು. ಅದೀಗ ನೆರವೇರುತ್ತಿದೆ ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದಾರೆ.