ಚಿಕ್ಕಮಗಳೂರು: ಪುರುಷ ಪ್ರಾಧಾನ್ಯತೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು, ಹೆಣ್ಣು ಮಕ್ಕಳೇ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆಸಿ ಲಿಂಗ ಸಮಾನತೆಯ ಸಂದೇಶ ಸಾರಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು (Kaduru) ತಾಲೂಕಿನ ಚಪಟ್ಟಣದಲ್ಲಿ ನಡೆದಿದೆ.
ಗುರುವಾರ (ಮಾ.12) ಬೀರೂರು ಪಟ್ಟಣದಲ್ಲಿ ಭಾವಸಾರ ಸಮಾಜದ ವಿಶ್ವನಾಥ ಎಂಬುವವರು ನಿಧನರಾಗಿದ್ದರು. ಮೃತ ವಿಶ್ವನಾಥ್ ಅವರಿಗೆ ಮಕ್ಕಳೇ ಇರಲಿಲ್ಲ. ಅವರ ಸಹೋದರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಹೀಗಾಗಿ ಮೃತ ವಿಶ್ವನಾಥ್ ಸಹೋದರನ ಮಗಳು ಐಶ್ವರ್ಯ ಅವರೂ ನನ್ನ ತಂದೆ. ಅದಕ್ಕೆ ಅವರ ಅಂತ್ಯಸಂಸ್ಕಾರದ ಅಂತಿಮ ವಿಧಿ-ವಿಧಾನವನ್ನ ತಾನೇ ಮಾಡೋದಾಗಿ ಕುಟುಂಬದವರಿಗೆ ತಿಳಿಸಿದ್ದಳು. ಕುಟುಂಬ ಹಾಗೂ ಭಾವಸಾರ ಸಮಾಜದ ಎಲ್ಲಾ ಮುಖಂಡರು ಒಪ್ಪಿಗೆ ನೀಡಿದರು. ಇದನ್ನೂ ಓದಿ: ಸಿಲಿಂಡರ್ ಕೊರತೆ – ಬಯೋಗ್ಯಾಸ್ ಉತ್ಪಾದನೆಗೆ ಮುಂದಾದ ಜಿಬಿಎ
ಅದರಂತೆ ಸಹೋದರಿ ಭಾವನಳನ್ನೂ ಜೊತೆ ಸೇರಿಸಿಕೊಂಡು ಶುಕ್ರವಾರ (ಮಾ.13) ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ. ಹೆಗಲ ಮೇಲೆ ಕುಡಿಕೆ ಹೊತ್ತು ಮೃತದೇಹದ ಸುತ್ತ ಮೂರು ಸುತ್ತು ಹಾಕಿ ತಂದೆ (ಚಿಕ್ಕಪ್ಪ) ಅಂತ್ಯಕ್ರಿಯೆ ನಡೆಸಿದ್ದಾರೆ.

