ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿರುವಾಗಲೇ ಕನ್ನಡ ಚಿತ್ರರಂಗದ ತಲೆತಗ್ಗಿಸಿವಂತಹ ಕೆಲಸ ಮಾಡಿದ್ದಾರೆ ಕೆಲವರು. ಸಿನಿಮಾ ಮಾಡ್ತಿನಿ ನಿಮಗೆ ಅವಕಾಶಕೊಡ್ತಿನಿ ಅಂತ ಹೇಳಿ ದೂರದ ಪುಣೆಯಲ್ಲಿ ಅವಕಾಶಕ್ಕಾಗಿ ಕಾಯ್ತಿದ್ದ ಹೆಣ್ಣುಮಕ್ಕಳನ್ನ ಯಾಮಾರಿಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರಾಮಾ ಶಾಮಾ ಭಾಮಾ, ಹೃದಯವಂತ, ಮಾತಾಡು ಮಾತಾಡು ಮಲ್ಲಿಗೆ, ರಾಜಾಹುಲಿ ಅಂತ ಸದಭಿರುಚಿ ಸಿನಿಮಾಗಳನ್ನ ಕನ್ನಡ ಸಿನಿರಸಿಕರಿಗೆ ಕೊಟ್ಟ ನಿರ್ಮಾಪಕ ಕೆ. ಮಂಜು ಅವರ ಹೆಸರನ್ನ ನಕಲಿ ನಿರ್ಮಾಪಕ ಬಳಸಿದ್ದಾನೆ.
ತನ್ನ ಪರಿಚಯ ಹೀಗೆ ಮಾಡ್ತಿದ್ದ:
ನಾನು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ. 40 ಸಿನಿಮಾ ನಿರ್ಮಾಣ ಮಾಡಿದ್ದೇನೆ. ಹೊಸ ಸಿನಿಮಾದಲ್ಲಿ ಅಭಿನಯಿಸಲು ನಾಯಕಿಯರು ಬೇಕಾಗಿದ್ದಾರೆ ಅಂತ ಹೇಳಿ ಪುಣೆಯಲ್ಲಿ ಆಡಿಷನ್ ಮಾಡಿದ್ದ.
ಇಲ್ಲಿ ಕೆಲ ಹುಡುಗಿಯರನ್ನು ಆಯ್ಕೆ ಮಾಡಿ ಹೈದರಾಬಾದ್‍ಗೆ ಜೊತೆಯಲ್ಲಿ ಕರೆದುಕೊಂಡು ಬಂದು ಅಲ್ಲಿಂದ ಬೆಂಗಳೂರಿಗೆ ಕರೆ ತಂದಿದ್ದಾನೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಲಾಡ್ಜಿಂಗ್ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಈತ ಸಿನಿಮಾದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು, ಮದ್ಯಪಾನ ಮಾಡ್ಬೇಕು. ತುಂಡುಬಟ್ಟೆ ಹಾಕಬೇಕು ಅಂತ ಪುಸಲಾಯಿಸಿದ್ದಾನೆ. ಎರಡ್ಮೂರು ದಿನ ಬೆಂಗಳೂರಿನಲ್ಲಿ ಇರಿಸಿಕೊಂಡು ವಾಪಸ್ ಕಳುಹಿಸಿದ್ದಾನೆ.
ಆಡಿಷನ್ ನಡೆದ ಮೇಲೆ ಆತನಿಂದ ಯಾವುದೇ ಕರೆ ಬರದ ಹಿನ್ನೆಲೆಯಲ್ಲಿ ಆತನಿಂದ ಮೋಸ ಹೋದ ಯುವತಿ, ಸ್ಯಾಂಡಲ್‍ವುಡ್ ನಿರ್ದೇಶಕನಾಗಿರುವ ಕೆ ಮಂಜು ಅವರ ನಂಬರ್ ಅನ್ನು ಪತ್ತೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಅವರು ನಾನು ಯಾವುದೇ ರೀತಿಯ ಆಡಿಷನ್ ಮಾಡಿಲ್ಲ. ನನಗೆ ಗೊತ್ತೆ ಇಲ್ಲ ಎಂದು ಹೇಳಿದ್ದಾರೆ.
ಇದಾದ ಬಳಿಕ ನಕಲಿ ನಿರ್ಮಾಪಕ ಮಂಜುನಾಥ್‍ಗೆ ಕೆ ಮಂಜು ಅವರು ಕರೆ ಮಾಡಿದಾಗ, ಸರ್ ನಮ್ಮ ಸಂಬಂಧಿಕರ ಸಾವಾಗಿದೆ ಆಮೇಲೆ ಮಾತಾಡ್ತಿನಿ ಅಂತ ಹೇಳಿದ್ದಾನೆ. ಇದಾದ ಬಳಿಕ ಯಾವುದೇ ಫೋನ್ ಬಂದಿಲ್ಲ ಅಂತಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.