ಬೆಂಗಳೂರು: ವಿಶ್ವವಿಖ್ಯಾತ ದಸರಾ ಹಬ್ಬ ಬಂತು ಎಂದರೆ ಎಲ್ಲೆಡೆ ಸಂಭ್ರಮ ಕಾಣಸಿಗುತ್ತದೆ. ದಸರಾ ಕರ್ನಾಟಕದ ನಾಡಹಬ್ಬ ಆಗಿದ್ದು 10 ದಿನಗಳ ನಡೆಯುವ ವಿಶೇಷ ಹಬ್ಬದಲ್ಲಿ 9 ದಿನಗಳ ಕಾಲ ವಿವಿಧ ಆಚರಣೆಗಳನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ನವರಾತ್ರಿಯ 9 ದಿನ ಆಚರಣೆ ಮಾಡುವುದರಿಂದ 9 ಮಹಡಿಯ ತರಹ ಮಾಡಿ ಗೊಂಬೆಗಳನ್ನು ಕೂರಿಸುವುದು ನಮ್ಮ ಕರ್ನಾಟಕದ ವಿಶಿಷ್ಟತೆಯಾಗಿದೆ.
ಮೈಸೂರು ಭಾಗದಲ್ಲಿ `ಬೊಂಬೆ ಕೂಡಿಸುವ’ ಪದ್ಧತಿಯೂ ಸರಿಸುಮಾರು 500 ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ದಸರಾ ಹಬ್ಬದ ನವರಾತ್ರಿ ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಹಬ್ಬವಾಗಿದ್ದು, ಈ ವೇಳೆ ಮನೆಯಲ್ಲಿ ಹೆಣ್ಣುಮಕ್ಕಳು ನವರಾತ್ರಿಯ ಅಷ್ಟು ದಿನಗಳು ಬೊ0ಬೆ ಕೂರಿಸಿ ಸಿಂಗಾರ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಅಲ್ಲದೇ ಅವುಗಳಿಗೆ ಪ್ರತಿದಿನ ಪೂಜೆ ಮಾಡಿ ಆರತಿ ಬೆಳಗಿ ಪುಟ್ಟ ಮಕ್ಕಳನ್ನು ಕರೆದು ಅವರಿಗೆ ಬಾಗಿನ ಕೊಟ್ಟು ಕಳುಹಿಸುವ ಪದ್ಧತಿ ರೂಡಿಯಲ್ಲಿದೆ. ಇಲ್ಲಿ ಪ್ರಮುಖವಾಗಿ ಮದುವೆಯಾದ ಹೆಣ್ಣು ಮಕ್ಕಳು ತವರಿನಿಂದ ತಂದ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುತ್ತಾರೆ.
Advertisement
Advertisement
ಪತ್ರಿ ಮನೆಯಲ್ಲಿ ಕೂರಿಸುವ ಒಂದೊಂದು ಬೊಂಬೆಗಳು ಒಂದೊಂದು ವಿಶೇಷ ಕಥೆ ಹೇಳುತ್ತವೆ. ನಮ್ಮ ಸಂಸ್ಕೃತ , ಧಾರ್ಮಿಕ ಪರಂಪರೆ, ಸಾಹಿತ್ಯ, ಆಚರಣೆ, ವೈಚಾರಿಕತೆ, ವಿಜ್ಞಾನ, ಪೌರಾಣಿಕ ಕಥೆ, ಹೀಗೆ ಕಾಲ, ವಿಷಯಕ್ಕೆ ತಕ್ಕಂತೆ ಗೊಂಬೆಗಳನ್ನು ಆಯ್ಕೆ ಮಾಡಿ ಸಿದ್ಧತೆ ಮಾಡಲಾಗಿರುತ್ತದೆ. ಅಲ್ಲದೇ ನಾಡಿನ ಸಂ ಸಂಸ್ಕೃತಿ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಸಾರುವ ಗೊಂಬೆಗಳು ಪ್ರಮುಖ ಸ್ಥಾನ ಪಡೆದಿರುತ್ತದೆ. ಮುಖ್ಯವಾಗಿ ಗ್ರಾಮೀಣ ಭಾಗದ ಬದುಕಿನ ಕಲೆಯನ್ನು ಸಾರುವ, ದರ್ಬಾರಿನಲ್ಲಿ ಕುಳಿತ ರಾಜ ಹೀಗೆ ಒಂದೊಂದು ನಯನ ಮನೋಹರವಾಗಿರುತ್ತದೆ.
Advertisement
ಇಂತಹ ಬೊಂಬೆ ಹಬ್ಬಕ್ಕೆ ಗೊಂಬೆ ಕೂರಿಸುವ ಕಾರ್ಯಕ್ಕೆ ಪೂರಕವಾಗಿ ಗೊಂಬೆ ಮಾರಾಟ ಹಾಗೂ ಪ್ರದರ್ಶನಗಳು ನಡೆಸಲಾಗುತ್ತದೆ. ಕರ್ನಾಟಕದ ಮೈಸೂರು, ಬೆಂಗಳೂರು, ಚನ್ನಪಟ್ಟಣ, ಕಿನ್ನಾಳ ಮತ್ತು ಖಾನಾಪುರದಲ್ಲಿ ತಯಾರಾಗಿರುವ ಬೊಂಬೆಗಳ ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶದ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ತಯಾರು ಮಾಡಲಾಗುವ ಗೊಂಬೆಗಳು ಕೂಡ ಈ ವೇಳೆ ಕಾಣಬಹುದಾಗಿದೆ.
Advertisement
ಹವ್ಯಾಸವಾದ ಸಂಪ್ರದಾಯ ಪದ್ಧತಿ: ಬಹಳಷ್ಟು ಹೆಣ್ಣು ಮಕ್ಕಳಿಗೆ ಸಂಪ್ರದಾಯವಾಗಿ ಈ ಆಚರಣೆ ಸದ್ಯ ಒಂದು ಕಲೆಯ ಹವ್ಯಾಸವಾಗಿದೆ. ತಾವು ಪ್ರದರ್ಶಿಸುವ ಗೊಂಬೆಗಳಲ್ಲಿ ಒಂದು ವಿಶಿಷ್ಟ ಕಥೆಯನ್ನೇ ಹೇಳುವ ಸಾಮರ್ಥ್ಯ ಇಂದು ರೂಪುಗೊಂಡಿದೆ. ಇದರಲ್ಲಿ ಹಣದ ಜೊತೆಗೆ ಸಮಯವನ್ನು ಮೀಸಲಿಡುವ ಕೌಶಲ್ಯವೂ ಹೆಣ್ಣು ಮಕ್ಕಳಲ್ಲಿ ಬೆಳೆಯುತ್ತದೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಪರಿಕಲ್ಪನೆ ಮೂಡಿ ವಿಶಿಷ್ಟತೆ ಕಾರಣವಾಗುತ್ತದೆ. ದಸರಾ ಪ್ರಾರಂಭಕ್ಕೆ ಮುನ್ನವೇ ಆರಂಭವಾರುವ ಇದರ ಸಿದ್ಧತೆ ಕಾರ್ಯ ಸಿದ್ಧಪಡಿಸುವ ವ್ಯಕ್ತಿಯ ಕ್ರಿಯಾಶೀಲತೆಯನ್ನು ಪ್ರದರ್ಶಿಸುತ್ತದೆ.
ಗೊಂಬೆಗಳ ವಿಶಿಷ್ಟತೆ: ಮೊದಲೇ ಹೇಳಿದಂತೆ ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗದ ವಿಭಿನ್ನ ಶೈಲಿಯ ಹಾಗೂ ಗಾತ್ರದ, ಸನ್ನಿವೇಶಗಳ ಬೊಂಬೆಗಳು ಎಲ್ಲೆಡೆ ನೋಡುಗರನ್ನು ಸೆಳೆಯುತ್ತದೆ. ಇದು ನೋಡುಗರನ್ನು ಮತ್ತೊಂದು ಲೋಕಕ್ಕೆ ಕರೆದ್ಯೊಯುತ್ತದೆ. ಇಂತಹ ಕಲೆ ಕ್ಷಣ ಮಾತ್ರದಲ್ಲಿ ಎಂತಹರನ್ನು ಕ್ಷಣ ಮಾತ್ರದಲ್ಲಿ ಸೆಳೆಯುತ್ತದೆ.
ದಸರಾ ಗೊಂಬೆ ನಿರ್ವಹಣೆ: 9 ದಿನಗಳ ನಡೆಯುವ ಪ್ರದರ್ಶನ ಮುಕ್ತಾಯ ವಾದ ಬಳಿಕ ಮುಂದಿನ ವರ್ಷಕ್ಕೆ ಅವುಗಳ ನಿರ್ವಹಣೆ ಮಾಡುವುದು ಪ್ರಮುಖವಾಗಿದ್ದು ಈ ಕುರಿತು ಸಲಹೆಗಳು ಇಂತಿದೆ. ಮುಖ್ಯವಾಗಿ ಗೊಂಬೆಗಳನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಇಡುವುದರಿಂದ ಅವುಗಳ ಬಣ್ಣ ಹಾಗೂ ಹೊಳಪು ಕೆಡದಂತೆ ರಕ್ಷಣೆ ಮಾಡಬಹುದು. ಅಲ್ಲದೇ ಮಣ್ಣಿನ ಗೊಂಬೆ ಇತರೇ ಗೊಂಬೆಗಳನ್ನು ಪ್ರತ್ಯೇಕವಾಗಿ ಇಡುವುದು ಒಳಿತು. ಮುಂದಿನ ವರ್ಷ ಅವುಗಳ ಬಳಕೆ ವೇಳೆ ಬಣ್ಣ ಮಾಸಿದ್ದರೆ, ಅಂತಹವುಗಳನ್ನು ವೃತ್ತಿಪರ ವ್ಯಕ್ತಿಗಳಿಗೆ ನೀಡುವುದು ಸೂಕ್ತ. ಇದರೊಂದಿಗೆ ಪ್ಯಾಕ್ ಮಾಡಿದ ಗೊಂಬೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ರಕ್ಷಣೆ ಮಾಡಬೇಕಾಗುತ್ತದೆ.
ನಮಗೆ ಕಳುಹಿಸಿ: ನಾಡಿನಾದ್ಯಂತ ಹಲವು ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿದರೂ ಅದನ್ನು ನೋಡಲು ಎಲ್ಲರಿಗೂ ಸಾಧ್ಯವಿಲ್ಲ. ಅದ್ದರಿಂದ ನಿಮ್ಮ ಮನೆಯಲ್ಲಿರುವ ದಸರಾ ಬೊಂಬೆಯನ್ನು ಇಡೀ ಕರ್ನಾಟಕ ಜನತೆ ನೋಡವಂತೆ ಮಾಡಲು ನಮಗೆ ಕಳುಹಿಸಿ. ಏನ್ ಮಾಡ್ಬೇಕು? ನಿಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸಿದ್ದರೆ ಈಗಲೇ ನಿಮ್ಮ ಹೆಸರು ಮತ್ತು ವಿಳಾಸದೊಂದಿಗೆ ವಿಡಿಯೋ, ಫೋಟೋವನ್ನು 99000 60222 ಸೆಂಡ್ ಮಾಡಿ.
ದಸರಾ ಸುದ್ದಿಗಳು:
1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?
2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ
3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್
4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ
5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ
6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ
7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv