ಕೋಲಾರ: ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಯುವತಿಯರು ನಾಗಿಣಿ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿ ನೋಡುಗರನ್ನು ಆಶ್ಚರ್ಯ ಉಂಟು ಮಾಡಿದ್ದಾರೆ.
ಯುವಕರಿಗೆ ಉತ್ಸಾಹದ ಹಬ್ಬ ಗಣೇಶ ಹಬ್ಬ, ಸಾಮಾನ್ಯವಾಗಿ ಪೂಜೆ ಮಾಡಿ ಒಳ್ಳೆದು ಮಾಡಪ್ಪ ಅಂತ ಹೆಣ್ಣು ಮಕ್ಕಳು ಬೇಡಿಕೊಳ್ಳುತ್ತಾರೆ. ಆದರೆ ಇಂತಹ ಹೆಣ್ಣು ಮಕ್ಕಳ ಮಧ್ಯೆ ನಾವು ವಿಭಿನ್ನ ಎಂದು ಕೋಲಾರದ ಕಠಾರಿ ಪಾಳ್ಯ ಯುವತಿಯರು ನಗರದ ಪ್ರಮುಖ ಬೀದಿಗಳಲ್ಲಿ ನಾಗಿಣಿ ಡಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
Advertisement
Advertisement
ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್‍ಗೆ ಸಖತ್ ನಾಗಿಣಿ ಸ್ಟೆಪ್ಸ್ ಹಾಕಿ, ಕಿಕ್ ಕೋಡೊ ಸ್ಟಂಟ್‍ಗಳ ಮೂಲಕ ಗಣೇಶ ವಿಸರ್ಜನೆ ಮಾಡಿ ನಗರದ ಜನರನ್ನು ಅಚ್ಚರಿಗೊಳಿಸಿದ್ದರು. ಕೋಲಾರ ನಗರದ ಕಠಾರಿ ಪಾಳ್ಯ ಯುವತಿಯರು ನಾಗಿಣಿ ಹಾಡಿಗೆ ಹುಚ್ಚೆದ್ದು ಕುಣಯುವ ಮೂಲಕ ಯುವಕರಿಗೆ ಸವಾಲ್ ಎಸೆದ್ದರು. ಹೆಣ್ಣು ಮಕ್ಕಳು ನಗರದ ಪ್ರಮುಖ ರಸ್ತೆಗಳಲ್ಲಿ ನಾಗಿಣಿ ಸಾಂಗ್ ಸೇರಿದಂತೆ ಹಲವು ಸಾಂಗ್‍ಗಳಿಗೆ ಸ್ಟೆಪ್ಸ್ ಹಾಕಿ ಎಲ್ಲರೂ ಬೆರಗಾಗಿ ನೋಡುವಂತೆ ಕುಣಿದ್ದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv