ಬೆಂಗಳೂರು: ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದ ವೇಳೆ ಯುವತಿಯರು ಪೊಲೀಸರಿಗೆ ಅವಾಜ್ ಹಾಕಿದ ಘಟನೆ ರಿಚ್ಮಂಡ್ ಸರ್ಕಲ್ ಬಳಿ ನಡೆದಿದೆ.
Advertisement
ಇಲ್ಲಿನ ರಮಣಶ್ರೀ ಹೋಟೆಲ್ ಮುಂಭಾಗ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ತಂಡಕ್ಕೆ ನಾಲ್ವರು ಯುವತಿಯರು ಅವಾಜ್ ಹಾಕಿದ್ದಾರೆ. ಅಷ್ಟೆ ಅಲ್ಲದೆ ತಾನೊಬ್ಬ ರಾಷ್ಟ್ರೀಯ ವಾಹಿನಿಯ ವರದಿಗಾರ್ತಿ ಅಂತಾ ಪೊಲೀಸರನ್ನ ನಿಂದಿಸಿದ್ದಾರೆ.
Advertisement
Advertisement
Advertisement
ಮತ್ತೊಂದೆಡೆ ಕುಡಿದು ಗಾಡಿ ಓಡಿಸ್ತಿದ್ದ ಇರಾನಿ ಪ್ರಜೆಯನ್ನ ಚೆಕ್ ಮಾಡೋಕೆ ಹೋದಾಗ ಹೈಡ್ರಾಮ ನಡೆಸಿದ ಘಟನೆ ತಡರಾತ್ರಿ ಶಾಂತಿನಗರದ ಕೆಎಸ್‍ಆರ್‍ಟಿಸಿ ಬಸ್ ಸ್ಟಾಪ್ ಮುಂದೆ ನಡೆದಿದೆ. ಎಂಜಿ ರಸ್ತೆಯಲ್ಲಿ ಕಂಠ ಪೂರ್ತಿ ಕುಡಿದು ಕಾರು ಚಲಾಯಿಸಿಕೊಂಡು ಬರ್ತಿದ್ದ ಇರಾನಿ ಯುವಕ ಯುವತಿಯರ ಕಾರನ್ನು ತಡೆದು ಪೊಲೀಸರು ತಪಾಸಣೆ ನಡೆಸೋಕೆ ಮುಂದಾಗಿದ್ದಾರೆ. ಆದ್ರೆ ಕುಡಿದ ಅಮಲಿನಲ್ಲಿದ್ದ ಯುವಕ ಮತ್ತು ಯುವತಿಯನ್ನ ಆಲ್ಕೋಮಿಟರ್ ಊದುವಂತೆ ಪೊಲೀಸರು ಅದೆಷ್ಟು ಪರಿ ಪರಿಯಾಗಿ ಕೇಳಿಕೊಂಡರು ಕೂಡ ಅದಕ್ಕೆ ತಲೆಕೆಡಿಸಿಕೊಳ್ಳದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು.
ನಂತರ ಪೊಲೀಸರು ಅಲ್ಕೋಮೀಟರ್ ಊದುವಂತೆ ಉತ್ತಾಯ ಮಾಡಿದ್ದಕ್ಕೆ ಸಂಚಾರಿ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗೋಕೆ ನೋಡಿದ್ದಾರೆ. ತಕ್ಷಣ ನೈಟ್ ರೌಂಡ್ಸ್ ನಲ್ಲಿದ್ದ ಹೊಯ್ಸಳ ವಾಹನ ಸ್ಥಳಕ್ಕೆ ಆಗಮಿಸಿ ಇಬ್ಬರು ಯುವಕ ಯುವತಿಯರನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸೋಕೆ ಕರೆದುಕೊಂಡು ಹೋಗಿದ್ದಾರೆ.