ನವದೆಹಲಿ: ಸರ್ಕಾರೇತರ ಸಂಸ್ಥೆಯೊಂದು(ಎನ್‍ಜಿಓ) ನಡೆಸುವ ಬಾಲಕಿಯರ ಆಶ್ರಯ ನಿವಾಸದಲ್ಲಿ ಸಿಬ್ಬಂದಿ ತಪ್ಪು ಮಾಡಿದಳು ಅಂತ ಬಾಲಕಿಯೊಬ್ಬಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಅಮಾನವಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರದಂದು ದೆಹಲಿಯ ಮಹಿಳಾ ಆಯೋಗದ(ಡಿಡಬ್ಲ್ಯೂಸಿ) ಅಧಿಕಾರಿಗಳು ನೈಋತ್ಯ ದೆಹಲಿಯ ದ್ವಾರಕಾದಲ್ಲಿರುವ ಎನ್‍ಜಿಓವೊಂದು ನೋಡಿಕೊಳ್ಳುವ ಬಾಲಕಿಯರ ಆಶ್ರಯ ನಿವಾಸಕ್ಕೆ ದಿಢೀರ್ ಪರಿಶೀಲನೆ ನಡೆಸಲು ತೆರೆಳಿದ್ದರು. ಈ ವೇಳೆ ಆಶ್ರಯ ನಿವಾಸದಲ್ಲಿ ಇರುವ ಬಾಲಕಿಯರಿಗೆ ಅಲ್ಲಿನ ಸಿಬ್ಬಂದಿ ಕಿರುಕುಳ ಕೊಡುತ್ತಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
Advertisement
Advertisement
ಈ ಆಶ್ರಯ ನಿವಾಸದಲ್ಲಿ 6 ವರ್ಷದಿಂದ 15 ವರ್ಷ ವಯಸ್ಸಿನ ಒಟ್ಟು 22 ಬಾಲಕಿಯರು ಇರುತ್ತಾರೆ. ಇಲ್ಲಿ ಇರುವ ಬಾಲಕಿಯರ ಕೈಯಲ್ಲಿ ಸಿಬ್ಬಂದಿ ಮನೆಯ ಎಲ್ಲಾ ಕೆಲಸ ಮಾಡಿಸುತ್ತಾರೆ. ಅಲ್ಲದೆ ಕೋಣೆಗಳನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ನಮಗೆ ಶಿಕ್ಷೆ ನೀಡುತ್ತಾರೆ. ಸ್ಕೇಲ್‍ನಿಂದ ಹೊಡೆಯುತ್ತಾರೆ, ರಜಾ ದಿನಗಳಲ್ಲಿ ಪೋಷಕರ ಬಳಿ ಹೋಗಲು ಬಿಡುವುದಿಲ್ಲ. ಹಾಗೆಯೆ ಇಲ್ಲಿ ಸಿಬ್ಬಂದಿ ಕಡಿಮೆ ಇರುವುದರಿಂದ ಮಕ್ಕಳ ಕೈಯಲ್ಲೇ ಅಡುಗೆ ಮಾಡಸ್ತಾರೆ. ಶೌಚಾಲಯ ಹಾಗೂ ಮನೆಯನ್ನು ಸ್ವಚ್ಛ ಮಾಡಿಸ್ತಾರೆ. ಸರಿಯಾದ ಗುಣಮಟ್ಟದ ಊಟ ಕೂಡ ನೀಡಲ್ಲ ಅಂತ ಬಾಲಕಿಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
Advertisement
Advertisement
ಅಷ್ಟೆ ಅಲ್ಲದೆ ಕೆಲವು ದಿನಗಳ ಹಿಂದೆ ಬಾಲಕಿಯೊಬ್ಬಳು ಹೇಳಿದ ಮಾತನ್ನು ಕೇಳಿಲ್ಲ ಅಂತ ಸಿಬ್ಬಂದಿ ಅವಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಡಿಡಬ್ಲ್ಯೂಸಿ ಅಧಿಕಾರಿಗಳು ಆರೋಪಿಗಳ ಮೇಲೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಮಕ್ಕಳ ರಕ್ಷಣೆ ಹಾಗೂ ಲೈಂಗಿಕ ಅಪರಾಧ ಕಾಯ್ದೆ ಹಾಗೂ ಜುವೆನೈಲ್ ನ್ಯಾಯಾಂಗ ಕಾಯ್ದೆ (Juvenile Justice Act) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv