ಬೆಂಗಳೂರು: ಆಸ್ಪತ್ರೆ ಮುಂಭಾಗದಲ್ಲೇ ತಡರಾತ್ರಿ ಎರಡು ಗಂಟೆವರೆಗೂ ಭರ್ಜರಿ ಡಿಜೆ ಪಾರ್ಟಿ ನಡೆಸಿದ ಘಟನೆ ಬೆಂಗಳೂರಿನ ಕ್ರಸೆಂಟ್ ರಸ್ತೆಯಲ್ಲಿ ನಡೆದಿದೆ.
ನಗರದ ಮಲ್ಲಿಗೆ ಆಸ್ಪತ್ರೆ ಮುಂಭಾಗದ ಶ್ರೀ ಚನ್ನಮ್ಮ ವಿಲಾಸ್ ಹೆಸರಿನ ಬಂಗಲೆಯಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿನ ಮ್ಯೂಸಿಕ್ ಸುಮಾರು ಎರಡು ಕಿಲೋಮಿಟರ್ ವರೆಗೆ ಕೇಳಿಸುತ್ತಿತ್ತು. ಇದರಿಂದಾಗಿ ಮಲ್ಲಿಗೆ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಅಕ್ಕಪಕ್ಕದವರು ಈ ಸೌಂಡ್ ಕೇಳಿ ತಡರಾತ್ರಿವರೆಗೆ ಕಿರಿಕಿರಿ ಅನುಭವಿಸಿದ್ದಾರೆ.
Advertisement
ಕೊನೆಗೆ ಈ ಬಗ್ಗೆ ಮಾಹಿತಿ ತಿಳಿದ ಹೈಗ್ರೌಂಡ್ಸ್ ಪೊಲೀಸರು ಸ್ಥಳಕ್ಕೆ ಬಂದು ಪಾರ್ಟಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೂ ಕೂಡ ಪಾರ್ಟಿ ಮಾಡೋರು ಮಾತ್ರ ಪೊಲೀಸರಿಗೂ ಡೋಂಟ್ ಕೇರ್ ಅನ್ನೋ ರೀತಿ ವರ್ತಿಸಿದ್ದಾರೆ. ನೂರಕ್ಕೂ ಹೆಚ್ಚು ಯುವಕ ಯುವತಿಯರೇ ತುಂಬಿದ್ದ ಡಿಜೆ ಪಾರ್ಟಿ ತಡರಾತ್ರಿ ಎರಡು ಗಂಟೆವರೆಗೂ ನಡಿದಿದೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಯುವಕ-ಯುವತಿಯರು ನಡುರಸ್ತೆಯಲ್ಲೇ ತೂರಾಡಿ ಮೋಜು ಮಸ್ತಿ ಮಾಡಿದ್ದಾರೆ.
Advertisement