ಬೆಂಗಳೂರು: ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಪ್ರೇಯಸಿಯೇ ಪ್ರಿಯಕರನನ್ನು ಕೊಲೆ ಮಾಡಿದ ಅಚ್ಚರಿಯ ಘಟನೆ ನಗರದ ಪೀಣ್ಯದ ಚಿಕ್ಕಬಿದರಕಲ್ಲುವಿನಲ್ಲಿ ನಡೆದಿದೆ.
ರಘು (32) ಕೊಲೆಯಾದ ವ್ಯಕ್ತಿ. ಪ್ರೇಯಸಿ ರೂಪಾ ತನ್ನ ಪ್ರಿಯಕರ ರಘುವನ್ನು ಕೊಲೆ ಮಾಡಿದ್ದಾಳೆ. ರಘು ಬುಧವಾರ ರಾತ್ರಿ ರೂಪಾಳ ಮಗಳ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನು. ಇದ್ದರಿಂದ ಕೋಪಗೊಂಡು ರೂಪಾ ರಘುವನ್ನು ಕೊಲೆ ಮಾಡಿದ್ದಾಳೆ ಅಂತಾ ಹೇಳಲಾಗ್ತಿದೆ.
ರಘು ಹಾಗೂ ರೂಪಾಳ ಗಂಡ ಪ್ರಭು ಒಂದೇ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಪ್ರಭು ತಿಪಟೂರಿಗೆ ಜಾತ್ರೆಗೆ ತೆರಳಿದ್ದನು. ಪ್ರಭು ಇಲ್ಲದ ಕಾರಣ ಪ್ರಿಯಕರ ರಘು ರಾತ್ರಿ ರೂಪಾಳ ಮನೆಗೆ ಬಂದಿದ್ದನು. ಈ ವೇಳೆ ರೂಪಾ ಮತ್ತು ರಘು ಮಧ್ಯೆ ಮಗಳ ವಿಚಾರದಲ್ಲಿ ಜಗಳ ನಡೆದಿದ್ದು, ನಂತರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ರೂಪಾ ತನ್ನ ಪ್ರಿಯಕರ ರಘುವಿನ ಹೊಟ್ಟೆ, ಕಿವಿ ಹಾಗು ಕತು ಕತ್ತರಿಸಿ ಕೊಲೆ ಮಾಡಿದ್ದಾಳೆ.
ಸದ್ಯ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದು, ರೂಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.