ಒಟ್ಟಾವಾ: ಯುವಕನೊಬ್ಬ ಯುವತಿಯನ್ನು ಕೊಲೆ ಮಾಡಿದ ನಂತರ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಕೆನಡಾದಲ್ಲಿ ನಡೆದಿದೆ.
ಶರಣ್‍ಜೀತ್ ಕೌರ್ (27) ಹಾಗೂ ನವ್‍ದೀಪ್ ಸಿಂಗ್(35) ಮೃತದೇಹ ಸೋಮವಾರ ಅಪಾರ್ಟ್‌ಮಂಟ್ ನ ಬೇಸ್‍ಮೆಂಟ್‍ನಲ್ಲಿ ಪತ್ತೆಯಾಗಿದೆ. ಇಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಯುವಕ ಕೊಲೆ ಮಾಡಿದ್ದು ಏಕೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಸೋಮವಾರ ಸುಮಾರು 2 ಗಂಟೆಗೆ ಅಪಾರ್ಟ್ ಮೆಂಟ್‍ನ ಬೇಸ್‍ಮೆಂಟ್‍ನಲ್ಲಿ ಶರಣ್‍ಜೀತ್ ಹಾಗೂ ನವ್‍ದೀಪ್ ಶವ ಪೊಲೀಸರಿಗೆ ಸಿಕ್ಕಿತ್ತು. ಇಬ್ಬರ ಪರಿಚಯ ಪಂಜಾಬ್‍ನ ಜಲಂದರ್ ಜಿಲ್ಲೆಯಲ್ಲಿ ಆಗಿತ್ತು. ಕೆನಡಾದಲ್ಲಿ ನವ್‍ದೀಪ್ ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನಲ್ಲೇ ಇಬ್ಬರ ಮೃತದೇಹ ಪತ್ತೆಯಾಗಿದೆ.
ಕೆನಡಾದ ಮಾಧ್ಯಮಗಳ ಪ್ರಕಾರ, ಶರಣ್‍ಜೀತ್ ಹಾಗೂ ನವ್‍ದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಇಬ್ಬರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಘಟನೆಯ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಬಗ್ಗೆ ಶರಣ್‍ಜೀತ್ ತಂದೆ ಪ್ರತಿಕ್ರಿಯಿಸಿ, ಕೆನಡಾ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಹೇಳಿದರು. ಅಲ್ಲದೆ ಅವರು ತಮ್ಮ ಮಗಳ ಅಂತಿಮ ಸಂಸ್ಕಾರವನ್ನು ಗ್ರಾಮದಲ್ಲಿಯೇ ಮಾಡಬೇಕು ಎಂದು ಬಯಸಿದ್ದಾರೆ.