ಬಳ್ಳಾರಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಸಾರ್ವಜನಿಕರು ಮರಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ.
ಬಳ್ಳಾರಿಯ ಸಿರಗುಪ್ಪದಲ್ಲಿ ಘಟನೆ ನಡೆದಿದ್ದು, ಸಿರಗುಪ್ಪ ಪಟ್ಟಣದ ಡ್ರೈವರ್ ಕಾಲೋನಿಯ ನಿವಾಸಿ ಮೂರ್ತಿ ಅದೇ ಪ್ರದೇಶದ 5 ವರ್ಷದ ಬಾಲಕಿಯನ್ನು ಚಾಕ್ಲೇಟ್ ಕೊಡಿಸುವುದಾಗಿ ಪುಸಲಾಯಿಸಿ ನಗರದ ಹೊರ ವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ನಂತರ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆಗ ಮಗು ಕಿರುಚಿದ್ದು, ಮಗುವಿನ ಧ್ವನಿ ಕೇಳಿದ ಜನ ಸ್ಥಳಕ್ಕೆ ಆಗಮಿಸಿ ಕಾಮುಕನನ್ನು ಎಳೆತಂದಿದ್ದಾರೆ. ಪಟ್ಟಣಕ್ಕೆ ಕರೆತಂದು ಮರಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ಬಳಿಕ ಸಿರಗುಪ್ಪ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.