Connect with us

Bagalkot

ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ, ನ್ಯಾಯ ಕೊಡಿಸಿ – ಪ್ರಧಾನಿ ಮೋದಿಗೆ ಬಾಗಲಕೋಟೆ ಬಾಲಕಿಯಿಂದ ಪತ್ರ

Published

on

ಬಾಗಲಕೋಟೆ: ಬಾಲಕಿಯೋರ್ವಳು ನನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ನ್ಯಾಯ ಕೊಡಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಪಬ್ಲಿಕ್ ಟಿವಿಗೂ ಸೇರಿದಂತೆ ಜಿಲ್ಲೆಯ ಹತ್ತಾರು ಇಲಾಖೆಗಳ ಅಧಿಕಾರಿಗಳಿಗೆ ಮನನೊಂದು ಪತ್ರ ಬರೆದಿದ್ದಾಳೆ.

ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಜವಾನ ವಿಜಯಕುಮಾರ್ ಗಾಳಪ್ಪಗೋಳ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆಂದು ಪತ್ರದಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ. ನಾನು ದಲಿತಳಾಗಿ ಹುಟ್ಟಿದ್ದು ತಪ್ಪಾ, ನಮಗೆ ನ್ಯಾಯ ಕೊಡಿಸಿ ಎಂದು ಬಾಲಕಿ ಅಳಲು ತೋಡಿಕೊಂಡಿದ್ದಾಳೆ. ಆದರೆ ಬಾಲಕಿ ಪತ್ರದಲ್ಲಿ ತನ್ನ ಹೆಸರನ್ನ ಎಲ್ಲಿಯೋ ಬರೆದಿಲ್ಲ.

ಬಾಲಕಿ ಮೇ 27ರಂದು ಮೋದಿಯವರಿಗೆ ಪತ್ರ ಬೆರೆದಿದ್ದಾಳೆ. ಆದರೆ ಪ್ರಧಾನ ಮಂತ್ರಿ ಕಾರ್ಯಲಯದಿಂದ ಇದೂವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಪತ್ರ ನಮ್ಮ ಕೈ ಸೇರಿದೆ. ಈಗಾಗಲೇ ಈ ಬಗ್ಗೆ ಸ್ಥಳ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿದ್ದೇವೆ. ಅಲ್ಲದೇ ಈ ಬಗ್ಗೆ ತನಿಖೆಗೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಸಿಇಓ ವಿಕಾಸ್ ಸುರಳ್ಕರ್ ಹೇಳಿದ್ದಾರೆ.

https://www.youtube.com/watch?v=TQ32k2cV-tw

 

Click to comment

Leave a Reply

Your email address will not be published. Required fields are marked *