ಬೆಳಗಾವಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ಬಿ.ಇ.ಸಿವಿಲ್ ಎಂಜಿನಿಯರಿಂಗ್ ವಿಭಾಗದ ಬುಶ್ರಾ ಮತೀನ್ 16 ಚಿನ್ನದ ಪದಕ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ರಾಯಚೂರಿನ ಎಸ್‍ಎಲ್‍ಎನ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ ಒಟ್ಟು 16 ಚಿನ್ನದ ಪದಕ ಪಡೆಯುವ ಮೂಲಕ ಅತೀ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿದ್ದಾಳೆ. ಇತಿಹಾಸದಲ್ಲೇ ಅತಿಹೆಚ್ಚು ಪದಕ ಪಡೆದ ಗೌರವಕ್ಕೆ ಬುಶ್ರಾ ಮತೀನ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ: ಸುನೀಲ್ ಕುಮಾರ್
ವಿಶ್ವೇಶ್ವರಯ್ಯ ಈವರೆಗಿನ ವಿವಿ ಇತಿಹಾಸದಲ್ಲಿ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳನ್ನು ಗಳಿಸಿದ್ದ ದಾಖಲೆಯಿತ್ತು. ಬುಶ್ರಾ ಮತೀನ್ ಅವರಿಗೆ 16 ಚಿನ್ನದ ಪದಕಗಳನ್ನು ನೀಡಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿನಂದಿಸಿದರು. ಬೆಂಗಳೂರಿನ ಬಿಎನ್‍ಎಂ ಇನ್‍ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಎಲೆಟ್ರಿಕಲ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ವಾತಿ ದಯಾನಂದ ಏಳು ಚಿನ್ನದ ಪದಕಗಳನ್ನು ಪಡೆದುಕೊಂಡರು.
ಕೆಎಲ್‍ಇ ಶೇಷಗಿರಿ ಕಾಲೇಜಿನ ವಿವೇಕ ಭದ್ರಕಾಳಿ ಏಳು ಚಿನ್ನದ ಪದಕ, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿನಿ ಚಂದನಾ.ಎಂ ಏಳು ಚಿನ್ನದ ಪದಕ, ಬೆಂಗಳೂರಿನ ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೊಂದಲ ಹಳ್ಳಿಯ ವಿಧ್ಯಾರ್ಥಿನಿ ರಮ್ಯಾ.ಟಿ ಆರು ಚಿನ್ನದ ಪದಕ, ಬೆಂಗಳೂರಿನ ಆರ್‍ಎನ್‍ಎಸ್ ನಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಪ್ರಜ್ಞಾ ಎನ್. ನಾಲ್ಕು ಚಿನ್ನದ ಪದಕ, ಶಿವಮೊಗ್ಗದ ಜೆಎನ್‍ಎನ್‍ಸಿಇ ವಿದ್ಯಾರ್ಥಿನಿ ಪಲ್ಲವಿ.ಪಿ ನಾಲ್ಕು ಚಿನ್ನದ ಪದಕ, ಬೆಂಗಳೂರಿನ ಆರ್‍ಎನ್‍ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ತೇಜಸ್ವಿನಿ.ಆರ್ ನಾಲ್ಕು ಚಿನ್ನದ ಪದಕ ಹಾಗೂ ಅಶ್ವಿತಾ.ಎನ್ ಮೂರು ಚಿನ್ನದ ಪದಕ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿನಿ ಸವಿತಾ.ಎಚ್.ಟಿ ಅವರಿಗೆ ಮೂರು ಚಿನ್ನದ ಪದಕ ಪ್ರದಾನ ಮಾಡಲಾಯಿತು.
57,498 ಜನರಿಗೆ ಎಂಜಿನಿಯರಿಂಗ್ ಪದವಿ: ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 515+ಪಿಎಚ್‍ಡಿ, 04 ಎಂ.ಎಸ್ಸಿ(ಎಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯಲ್ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯ 21ನೇ ಘಟಿಕೋತ್ಸವದಲ್ಲಿ 57,498 ಬಿಇ/ಬಿಟೆಕ್ ಪದವಿ, 902 ಬಿ.ಆರ್ಕ್ ಪದವಿ, 12 ಬಿ.ಪ್ಲಾನ್:4362 ಎಂಬಿಎ ಪದವಿ, 1387 ಎಂಸಿಎ, 1292 ಎಂಟೆಕ್:73 ಎಂ.ಆರ್ಕ್; 33 ಪಿಜಿ ಡಿಪೆÇ್ಲೀಮಾ:575ಕ್ಕಿಂತ ಹೆಚ್ಚು ಪಿ.ಎಚ್.ಡಿ:3 ಇಂಟಿಗ್ರೇಟೆಡ್ ಡ್ಯೂಯಲ್ ಡಿಗ್ರಿ ಹಾಗೂ 4 ಎಂ.ಎಸ್ಸಿ(ಎಂಜಿನಿಯರಿಂಗ್) ಬೈ ರಿಸರ್ವ್ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ