Connect with us

Cinema

ಬಾಡಿ ಮಸಾಜ್ ಸೆಂಟರ್‍ ಗೆ ಕನ್ನಡ ಸ್ಟಾರ್ ಕಾಮಿಡಿಯನ್ಸ್- ದೂರಿನ ಮೂಲಕ ಬಟಬಯಲಾಯ್ತು ಸ್ಫೋಟಕ ರಹಸ್ಯ

Published

on

ಮೈಸೂರು: ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸ್ಪಾ ನಲ್ಲಿದ್ದ ಓರ್ವ ಯುವತಿಯನ್ನು ರಕ್ಷಿಸಿ, ಸ್ಪಾ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನೊಂದ ಯುವತಿ ಈ ಹಿಂದೆ ಮೈಸೂರಿನ ಒಡನಾಡಿ ಸಂಸ್ಥೆಗೆ ಪತ್ರದ ಮೂಲಕ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಳು. ಪತ್ರದ ಮಾಹಿತಿ ಪಡೆದ ಒಡನಾಡಿ ಸಂಸ್ಥೆ ಸರಸ್ವತಿಪುರಂ ಠಾಣೆಯ ಪೊಲೀಸರು ಹಾಗೂ ಮಹಿಳಾ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಯುವತಿಯನ್ನ ರಕ್ಷಿಸಲಾಗಿದೆ. ಮಸಾಜ್ ಮಾಡಿಸಿಕೊಳ್ಳಲು ಬಂದ ಪುರಷರೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದರು ಎಂದು ನೊಂದ ಯುವತಿ ಆರೋಪಿಸಿದ್ದಳು ಇದನ್ನೂ ಓದಿ: ಸೆಕ್ಸ್ ದಂಧೆಯಲ್ಲಿದ್ದ ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ-ಒಂದು ರಾತ್ರಿಗೆ ಇಷ್ಟು ರೇಟ್

ಯುವತಿ ದೂರಿನಲ್ಲಿ ಏನಿದೆ?
ನನ್ನನ್ನು ಮಹಿಳೆಯರಿಗೆ ಮಸಾಜ್ ಮಾಡಲು ಅಂತಾ ಕರೆ ತರಲಾಗಿತ್ತು. ನಂತರದ ಕೆಲವು ದಿನಗಳಲ್ಲಿ ಪುರುಷರಿಗೆ ಮಸಾಜ್ ಮಾಡುವಂತೆ ನನ್ನ ಒತ್ತಡ ಹಾಕಲಾಯಿತು. ಒಬ್ಬಬ್ಬ ಪುರುಷರು ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ರು. ಈ ಬಗ್ಗೆ ಸ್ಪಾ ಮಾಲೀಕ ರಾಜೇಶ್ ಗೆ ತಿಳಿಸಿದ್ರೆ ಸಹಕರಿಸಬೇಕೆಂದು ಹೇಳಿದ್ದಾನೆ. ಈ ವೇಳೆ ಸ್ಪಾಗೆ ಸ್ಯಾಂಡಲ್‍ವುಡ್ ಇಬ್ಬರೂ ಹಾಸ್ಯ ನಟರಿಬ್ಬರು ಬಂದಿದ್ದು, ಅವರಿಗೂ ನಾನು ಮಸಾಜ್ ಮಾಡಿದ್ದೇನೆ. ಆದರೆ ನನಗೆ ಅನ್ಯ ಪುರುಷರೊಂದಿಗೆ ಲೈಂಗಿಕವಾಗಿ ಸಹಕರಿಸಲು ಇಷ್ಟವಿಲ್ಲ ಎಂದು ಯುವತಿ ಪೊಲೀಸರಿಗೆ ಲಿಖಿತ ದೂರಿನಲ್ಲಿ ತಿಳಿಸಿದ್ದಾಳೆ.

ರಾಜೇಶ್- ಸ್ಪಾ ಸೆಂಟರ್ ಮಾಲೀಕ

ಪೊಲೀಸರು ಮಾತ್ರ ಸ್ಯಾ ಸೆಂಟರ್ ಗೆ ಬರುತ್ತಿದ್ದ ಇಬ್ಬರೂ ಸ್ಟಾರ್ ನಟರ ಹೆಸರನ್ನು ಬಹಿರಂಗಗೊಳಿಸಿಲ್ಲ. ಇನ್ನೂ ಯುವತಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳ್ಳಿಯೊಂದರ ನಿವಾಸಿ ಎಂದು ತಿಳಿದು ಬಂದಿದ್ದು, ಸಿನಿಮಾಗಳಲ್ಲಿ ಅವಕಾಶ ಕೊಡಿಸಲಾಗುತ್ತದೆ ಎಂದು ನಂಬಿಸಿ ಸ್ಪಾ ಮಾಲೀಕ ರಾಜೇಶ್ ಮೈಸೂರಿಗೆ ಕರೆದುಕೊಂಡು ಬಂದಿದ್ದನು. ಸಿನಿಮಾದಲ್ಲಿ ಅವಕಾಶ ಸಿಗುವರೆಗೂ ಸ್ಪಾ ನಲ್ಲಿ ಫ್ರೀಯಾಗಿ ಕೆಲಸ ಮಾಡಬೇಕೆಂದು ಷರತ್ತು ವಿಧಿಸಲಾಗಿತ್ತು. ರಾಜೇಶ್ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *