ಬೆಂಗಳೂರು: ಮನೆಯವರು ಊರು ಊರು ಸುತ್ತಿ ಲಗ್ನ ಪತ್ರಿಕೆ ಹಂಚುತ್ತಿದ್ದರೆ, ಇತ್ತ ಮಗಳು ಕಳೆದ ಎರಡು ದಿನದಿಂದ ನಾಪತ್ತೆ ಆಗಿರುವ ಘಟನೆ ಬೆಂಗಳೂರಿನ ಗಾರೇ ಪಾಳ್ಯದಲ್ಲಿ ನಡೆದಿದೆ.
24 ವರ್ಷದ ಕಲ್ಯಾಣಿ ನಾಪತ್ತೆ ಆಗಿರುವ ಯುವತಿ. ಕಲ್ಯಾಣಿ ಎಂಜಿನಿಯರಿಂಗ್ ಮುಗಿಸಿಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಮಂಗಳವಾರ ಕೆಲಸಕ್ಕೆ ಹೋಗಿದ್ದ ಯುವತಿ ಮತ್ತೆ ಮನೆಗೆ ಹಿಂತಿರುಲಿಲ್ಲ.
ಯುವತಿ ಬಳಸುತ್ತಿದ್ದ ಎರಡು ಮೊಬೈಲ್ ನಂಬರ್ ಗಳು ಸ್ವಿಚ್ ಆಫ್ ಆಗಿದೆ. ಯುವತಿಗೆ ಮದುವೆ ಇಷ್ಟ ಇರಲಿಲ್ಲ ಹಾಗಾಗಿ ಆಕೆ ಎಲ್ಲಿಯೋ ಹೋಗಿರಬೇಕು ಎಂದುಕೊಳ್ಳುವುದಕ್ಕೆ ಆಗಲ್ಲ. ಏಕೆಂದರೆ ಕಲ್ಯಾಣಿ ಪ್ರೀತಿಸುತ್ತಿದ್ದ ಯುವಕನ ಜೊತೆಯೇ ಕುಟುಂಬಸ್ಥರು ಮದುವೆ ನಿಶ್ಚಯ ಮಾಡಿದ್ದಾರೆ.
ಮುಂದಿನ ತಿಂಗಳು ಮೂರನೇ ತಾರೀಕಿನಂದು ತಮಿಳುನಾಡಿನಲ್ಲಿ ಕಲ್ಯಾಣಿ ಮದುವೆ ಮಾಡಲು ಆಕೆಯ ಪೋಷಕರು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಯುವತಿಯ ನಾಪತ್ತೆಯಿಂದ ಕುಟುಂಬಸ್ಥರು ಈಗ ಕಂಗಾಲಾಗಿ ಹೋಗಿದ್ದಾರೆ. ಈ ಬಗ್ಗೆ ಸದ್ದುಗುಂಟೆ ಪಾಳ್ಯದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv