5 ವರ್ಷದ ಬಾಲಕಿಯೊಬ್ಬಳು ಯಾರ ಸಹಾಯವು ಇಲ್ಲದೇ ಸ್ಪೈಡರ್ ಮ್ಯಾನ್‍ನಂತೆ ಗೋಡೆ ಹತ್ತುವ ಬೆಚ್ಚಿ ಬೀಳಿಸುವವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಲಕಿಯು ತನ್ನ ಕೇವಲ ತನ್ನ ಕೈ ಹಾಗೂ ಕಾಲುಗಳ ಸಹಾಯದಿಂದ ಬಹಳ ಸಲೀಸಾಗಿ ತನ್ನ ಮನೆಯ ಗೋಡೆಯನ್ನು ಏರುತ್ತಾಳೆ. ವೀಡಿಯೋದಲ್ಲಿ ಬಾಲಕಿ ತನ್ನ ರೂಮ್‍ನ ಮೂಲೆಯಲ್ಲಿ ನಿಂತುಕೊಂಡು ತನ್ನ ಕೈ ಹಾಗೂ ಕಾಲುಗಳನ್ನು ಗೋಡೆ ಮೇಲಿಟ್ಟು, ನಂತರ ಗೋಡೆಯನ್ನು ಏರಲು ಆರಂಭಿಸುತ್ತಾಳೆ. ಕೊನೆಗೆ ಗೋಡೆ ತುದಿ ತಲುಪಿ, ತನ್ನ ಎರಡು ಕಾಲುಗಳನ್ನು ಆರಾಮಾಗಿ ಗಾಳಿಯಲ್ಲಿ ಬಿಡುತ್ತಾಳೆ. ಇದನ್ನೂ ಓದಿ: ನಂದಿಬೆಟ್ಟದ ಬಳಿ ಭೂಕುಸಿತ ಪ್ರಕರಣ – ರಸ್ತೆ ಮರು ನಿರ್ಮಾಣಕ್ಕೆ 80 ಲಕ್ಷ ಮಂಜೂರು
Spidergirl . wait. Wtf ???? pic.twitter.com/yT9NTIPYpJ
— Ffs OMG Vids ???????? (@Ffs_OMG) September 15, 2021
ಈ ಭಯಾನಕ ವೀಡಿಯೋವನ್ನು ಬಾಲಕಿಯ ಕುಟುಂಬ ಸದಸ್ಯರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ನಂತರ ಸೊಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಜೊತೆಗೆ ಸ್ಪೈಡರ್ ಗರ್ಲ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗುತ್ತಿದ್ದಂತೆ 124 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 600ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಈಗ ಮೋದಿ, ಬಿಜೆಪಿ ಹೆಸರು ಹೇಳಿದರೆ ಮಹಿಳೆಯರೇ ಓಡಾಡಿಸಿ ಹೊಡೆಯುತ್ತಾರೆ: ತಂಗಡಗಿ